ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಮೃತಪಟ್ಟಿದ್ದು ಮಿಲ್ಲರ್ ಮಗಳಲ್ಲ

Last Updated 12 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

‘ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ಮಿಲ್ಲರ್ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಐದು ವರ್ಷದ ಅವರ ಮಗಳು ಕ್ಯಾನ್ಸರ್‌ಗೆ ಬಲಿಯಾಗಿದ್ದಾಳೆ. ಆರ್‌ಐಪಿ’ ಎಂಬ ಬರಹವಿರುವ ಪೋಸ್ಟ್‌ಗಳು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಿಲ್ಲರ್ ಅವರಿಗೆ ಸಂತಾಪ ಸೂಚಿಸುವ ನೂರಾರು ಪೋಸ್ಟ್‌ಗಳನ್ನು ಕ್ರಿಕೆಟ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ‘ತಮ್ಮ ಮಗಳ ಕೊನೆಯ ಕ್ಷಣಗಳಲ್ಲಿ ಮಿಲ್ಲರ್ ಇರಲು ಸಾಧ್ಯವಾಗಲಿಲ್ಲ’ ಎಂದು ಕೆಲವರು ಉಲ್ಲೇಖಿಸಿದ್ದಾರೆ. ಆದರೆ ಇದು ಸುಳ್ಳು ಮಾಹಿತಿ.

ಐದು ವರ್ಷದ ಆ್ಯನೆ ಎಂಬ ಬಾಲಕಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು, ಈ ವಿಚಾರವನ್ನು ಮಿಲ್ಲರ್ ಅವರು ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದರು. ‘ನಿನ್ನ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಅಮೂಲ್ಯ’ ಎಂದು ಮಿಲ್ಲರ್ ಭಾವುಕರಾಗಿ ವಿದಾಯ ಹೇಳಿದ್ದರು. ಆದರೆ, ಮೃತಪಟ್ಟ ಬಾಲಕಿ ಮಿಲ್ಲರ್ ಅವರ ಮಗಳಲ್ಲ; ಅವರ ಕ್ರಿಕೆಟ್ ಅಭಿಮಾನಿ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಮಿಲ್ಲರ್ ಅವರ ಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಅಭಿಮಾನಿಗಳು, ಮೃತಪಟ್ಟಿರುವುದು ಅವರ ಮಗಳೇ ಎಂಬ ಅರ್ಥದಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT