ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check- ಸಾಯಿ ಬಾಬಾ ಮೂರ್ತಿಯನ್ನು ಧ್ವಂಸ ಮಾಡಿದ್ದು ಮುಸ್ಲಿಂ ವ್ಯಕ್ತಿ ಅಲ್ಲ

Published 20 ಜುಲೈ 2023, 23:19 IST
Last Updated 20 ಜುಲೈ 2023, 23:19 IST
ಅಕ್ಷರ ಗಾತ್ರ

ಕಬ್ಬಿಣದ ರಾಡು ಹಿಡಿದ ವ್ಯಕ್ತಿಯೊಬ್ಬ ಸಾಯಿ ಬಾಬ ಅವರ ಮೂರ್ತಿಯನ್ನು ಒಡೆದು ಹಾಕಲು ಯತ್ನಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ವಿಡಿಯೊ ಕೊನೆಯಲ್ಲಿ ವ್ಯಕ್ತಿಯು, ‘ಸಾಯಿ ಬಾಬ ಅವರು ಮುಸಲ್ಮಾನರಾಗಿದ್ದರು. ಅವರು ದೇವರಲ್ಲ. ಇವರ ಬದಲು ಚಂದ್ರಶೇಖರ್‌ ಆಝಾದ್‌, ಭಗತ್‌ ಸಿಂಗ್‌ ಅವರನ್ನು ಪೂಜಿಸಿ’ ಎನ್ನುತ್ತಿದ್ದಾರೆ. ಈ ವ್ಯಕ್ತಿಯು ಮುಸ್ಲಿಂ ಆಗಿದ್ದಾರೆ ಎಂದು ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

ಲಲನ್‌ಟಾಪ್‌ ಎನ್ನುವ ವಾಹಿನಿ ಈ ವಿಡಿಯೊವನ್ನು 2021ರ ಮಾರ್ಚ್‌ 31ರಂದು ಪ್ರಕಟಿಸಿದೆ. ಈ ಘಟನೆಯು ದೆಹಲಿಯ ಶಾಪುರದಲ್ಲಿ ನಡೆದಿದೆ. ವ್ಯಕ್ತಿಯು ಹಿಂದೂ ತೀವ್ರವಾದಿಯಾಗಿದ್ದು, ಸಾಯಿ ಬಾಬಾ ಅವರನ್ನು ಮುಸ್ಲಿಂ ಎಂದು ಆತ ನಂಬಿದ್ದ. ಆದ್ದರಿಂದ ಈ ಕೃತ್ಯ ಎಸಗಿದ್ದಾನೆ. ಸಾಯಿ ಬಾಬಾ ಮೂರ್ತಿಯನ್ನು ವ್ಯಕ್ತಿಯು ಒಡೆದು ಹಾಕಿದ್ದಾರೆಷ್ಟೆ, ಕಿತ್ತು ಹಾಕಿಲ್ಲ ಎಂದು ‘ಸ್ಕ್ರಾಲ್‌’ ಸುದ್ದಿ ಸಂಸ್ಥೆಯು ವರದಿ ಮಾಡಿದೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT