‘ಹಜ್ ಭವನ ನವೀಕರಣಕ್ಕೆ ಸಿಎಂ 5 ಸಾವಿರ ಕೋಟಿ ಅನುದಾನ ನೀಡಿದ್ದಾರೆ’ ಎಂಬ ಹೇಳಿಕೆಯನ್ನು ಕನ್ನಡದ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದೆ. ಆ ಪ್ರಸಾರದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ. ‘ನೂತನ ಸಂಸತ್ ಭವನಕ್ಕೆ ಮೋದಿ ಖರ್ಚು ಮಾಡಿದ್ದು ₹885 ಕೋಟಿ, ಅಯೋಧ್ಯೆ ರಾಮಮಂದಿರ ನಿರ್ಮಾಣದ ಅಂದಾಜು ವೆಚ್ಚ ₹3,000 ಕೋಟಿ. ಆದರೆ, ಹಜ್ ಭವನವನ್ನು ಕೇವಲ ನವೀಕರಿಸುವುದಕ್ಕೇ ಸಿ.ಎಂ ₹5,000 ಕೋಟಿ ನೀಡಿದ್ದಾರೆ’ ಎಂಬ ವಿವರಣೆಯನ್ನು ಈ ಸ್ಕ್ರೀನ್‌ಶಾಟ್ ಜೊತೆ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳುಸುದ್ದಿ.

ಈ ಪ್ರಸಾರ ಕುರಿತಾದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ‘ಪ್ರಜಾವಾಣಿ’ಯು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜಡ್. ಜಮೀರ್ ಅಹಮದ್ ಖಾನ್ ಅವರನ್ನು ಸಂಪರ್ಕಿಸಿತ್ತು. ಅವರು ಇದು ಸುಳ್ಳು ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ₹5,000 ಕೋಟಿ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನೀಡಲಾಗುವ ಅನುದಾನದಲ್ಲಿ ಕಡಿತವಾಗಬಹುದು ಎಂಬ ಆತಂಕ ನಮ್ಮ ಧಾರ್ಮಿಕ ಮುಖಂಡರಲ್ಲಿದೆ. ಇದನ್ನು ಮುಖ್ಯಮಂತ್ರಿಗಳ ಎದುರು ಪ್ರಸ್ತಾಪಿಸಿದ್ದೆ. ಹಜ್ ಭವನ ನವೀಕರಣಕ್ಕೆ ಸರ್ಕಾರವು ₹5 ಕೋಟಿ ನೀಡಿದೆ. ಈ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ತಿರುಚಿ, ಹಜ್ ಭವನ ನವೀಕರಣಕ್ಕೆ ಸಿ.ಎಂ ₹5,000 ಕೋಟಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.