ರಾಹುಲ್ ಗಾಂಧಿ ಅವರು ರೆಸ್ಟೋರೆಂಟ್ ಒಂದಕ್ಕೆ ಪ್ರವೇಶಿಸುವ ಮತ್ತು ಅಲ್ಲಿ ಮಾಂಸಾಹಾರ ತಿನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ವಿಡಿಯೊ ಜತೆಗೆ, ‘ನೋಡಿ, ಶ್ರಾವಣ ಮಾಸದಲ್ಲಿ ರಾಹುಲ್ ಗಾಂಧಿ ಮಾಂಸ ತಿನ್ನುತ್ತಿದ್ದಾರೆ. ಈ ಕಾರಣದಿಂದಲೇ ಜನರು ರಾಹುಲ್ ಅವರನ್ನು ಕುರಿತು ‘ಆಗಾಗ ಹಿಂದೂ ಆಗುತ್ತಾರೆ’ ಎಂದು ಹೇಳುವುದು’ ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಹಳೆಯ ವಿಡಿಯೊ.

ಶ್ರಾವಣ ಮಾಸ ಜುಲೈ 4ರಿಂದ ಆರಂಭವಾಗಿತ್ತು. ಆದರೆ ಈ ವಿಡಿಯೊ 2023ರ ಏಪ್ರಿಲ್ 22ರಂದು ಚಿತ್ರೀಕರಿಸಿದ್ದು. ಪತ್ರಕರ್ತ ಕುನಾಲ್ ವಿಜಯ್‌ಕರ್ ಅವರಿಗೆ ಸಂದರ್ಶನ ನೀಡುವ ವೇಳೆ ಈ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು. ಸಂದರ್ಶನದ ವೇಳೆ ರಾಹುಲ್ ಅವರು ದೆಹಲಿಯ ಅಲ್ ಜವಾಹರ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದರು. ಅಲ್ಲಿ ರಾಹುಲ್ ಮಾಂಸ ತಿಂದಿದ್ದರು. ರಾಹುಲ್ ಗಾಂಧಿ ಅವರು ಆ ವಿಡಿಯೊವನ್ನು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಅದೇ ವಿಡಿಯೊವನ್ನು ಬಳಸಿಕೊಂಡು, ರಾಹುಲ್ ಶ್ರಾವಣ ಮಾಸದಲ್ಲಿ ಮಾಂಸ ತಿನ್ನುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.