ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ತಮಿಳುನಾಡು ಸರ್ಕಾರ ದೇವಾಲಯವೊಂದನ್ನು ನೆಲಸಮ ಮಾಡಿದೆ ಎಂಬುದು ಸುಳ್ಳು

Published 22 ಜನವರಿ 2024, 21:56 IST
Last Updated 22 ಜನವರಿ 2024, 21:56 IST
ಅಕ್ಷರ ಗಾತ್ರ

ದೇವಸ್ಥಾನವೊಂದನ್ನು ಜೆಸಿಬಿಯಿಂದ ಕೆಡವುತ್ತಿರುವ ದೃಶ್ಯಗಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಕಾಂಚಿಪುರದ ನಿಮಾಂತಕರಾರ ಬೀದಿಯಲ್ಲಿರುವ ಸಾವಿರ ವರ್ಷ ಹಳೆಯದಾದ ಶ್ರೀನಲ್ಲಗಂಬ ವಿನಾಯಗರ್ (ವಿನಾಯಕ ದೇವಸ್ಥಾನ) ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ’ ಎಂಬ ಬರಹವೂ ಈ ವಿಡಿಯೊದಲ್ಲಿ ಇದೆ. ‘ತತ್ವಂ–ಅಸಿ’ ಎನ್ನುವ ‘ಎಕ್ಸ್‌’ ಖಾತೆಯ ಈ ವಿಡಿಯೊವನ್ನು ಹಂಚಿಕೊಂಡು, ‘ಹಿಂದೂ ದೇವಾಲಯಗಳ ಮೇಲೆ ನಡೆಸಿರುವ ಅಪರಾಧಕ್ಕಾಗಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್‌ ಅವರು ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂಬುದಕ್ಕೆ ನೋಡುವುದಕ್ಕೆ ಕಾಯುತ್ತಿದ್ದೇನೆ. ಯಾವೆಲ್ಲಾ ಹಿಂದೂ ಮತದಾರರು ಇವರಿಗೆ ಮತ ನೀಡಿದ್ದಾರೆ ಅವರಿಗೆ ನಾಚಿಕೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಶ್ರೀನಲ್ಲಗಂಬ ವಿನಾಯಗರ್ ದೇವಸ್ಥಾನವು ತಮಿಳುನಾಡು ಸರ್ಕಾರಕ್ಕೆ ಸೇರಿದ ದೇವಾಲಯವಲ್ಲ. ಅದು ಖಾಸಗಿ ಅವರಿಗೆ ಸೇರಿದ ದೇವಾಲಯ. ಇದರ ಟ್ರಸ್ಟಿ ಕೆ.ಸೆಂಥಿಲ್‌ ಕುಮಾರ್‌ ಅವರ ಮಗ ರಂಜಿತ್‌ ಕುಮಾರ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಇದು ನಮ್ಮದೇ ಆಸ್ತಿ. ಈ ದೇವಾಲಯವು 140 ವರ್ಷಗಳಷ್ಟು ಹಳೆಯದು. ದೇವಸ್ಥಾನವು ಶಿಥಿಲಾವಸ್ಥೆಯಲ್ಲಿತ್ತು. ಆದಕಾರಣ ದೇವಾಲಯವನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ 2024ರ ಜನವರಿ 2ರಂದು ನೆಲಸಮಗೊಳಿಸಲಾಗಿತ್ತು’ ಎಂದಿದ್ದಾರೆ. ಈ ಬಗ್ಗೆ ತಮಿಳುನಾಡು ಸರ್ಕಾರದ ಫ್ಯಾಕ್ಟ್‌ಚೆಕ್‌ ಘಟಕ ಕೂಡ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಆದ್ದರಿಂದ ತಮಿಳುನಾಡಿನ ಸರ್ಕಾರವು ದೇವಾಲಯವನ್ನು ನೆಲಸಮ ಮಾಡಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಬೂಮ್‌ಲೈಬ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT