ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌‌Fact Check: ರಾಹುಲ್ ಗಾಂಧಿ ಚೀನಾದ ಸಂವಿಧಾನದ ಪುಸ್ತಕದೊಂದಿಗೆ ಕಾಣಿಸಿಕೊಂಡಿಲ್ಲ

Published 22 ಮೇ 2024, 1:39 IST
Last Updated 22 ಮೇ 2024, 1:39 IST
ಅಕ್ಷರ ಗಾತ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೆಂಪು ಬಣ್ಣದ ಮುಖಪುಟವಿರುವ ವಿನ್ಯಾಸದ ಪುಸ್ತಕವೊಂದನ್ನು ಹಿಡಿದು ತೋರಿಸಿ, ಸಂವಿಧಾನ ಉಳಿಸುವಂತೆ ಜನರಲ್ಲಿ ಕೋರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ ಮತ್ತು ಇದು ಭಾರತದ ಸಂವಿಧಾನ ಪುಸ್ತಕವಲ್ಲ ಬದಲಿಗೆ ಚೀನಾದ ಸಂವಿಧಾನ ಪುಸ್ತಕ ಎಂದು ಹೇಳಲಾಗುತ್ತಿದೆ. ಹಿಮಂತ್‌ ಬಿಸ್ವಾ ಶರ್ಮಾ ಅವರು ಹೀಗೆ ಆರೋಪಿಸಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಭಾರತದ ಸಂವಿಧಾನವು ನೀಲಿ ಬಣ್ಣದ ಮುಖಪುಟವನ್ನು ಹೊಂದಿದೆ. ಚೀನಾದ ಸಂವಿಧಾನ ಪುಸ್ತಕಕ್ಕೆ ಕೆಂಪು ಬಣ್ಣದ ಮುಖಪುಟವಿದೆ ಎಂದಿದ್ದರು. ಆದರೆ, ಇದು ಸುಳ್ಳು ಸುದ್ದಿ. ರಾಹುಲ್‌ ಗಾಂಧಿ ಅವರು ತೋರಿಸುತ್ತಿರುವುದು ಭಾರತದ ಸಂವಿಧಾನದ ಕಿರುಹೊತ್ತಗೆಯಾಗಿದೆ. ಇದರ ಮೇಲೆ ‘ಕಾನ್‌ಸ್ಟಿಟ್ಯೂಷನ್‌ ಆಫ್‌ ಇಂಡಿಯಾ’ ಎಂದು ಬರೆಯಲಾಗಿದೆ. ಇಂಥ ಕಿರುಹೊತ್ತಗೆಯು ಅಮೆಜಾನ್‌ನಲ್ಲಿಯೂ ಮಾರಾಟಕ್ಕೆ ಲಭ್ಯವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೂ ಉಡುಗೊರೆಯಾಗಿ ಇಂಥ ಹೊತ್ತಗೆಯನ್ನು ನೀಡಲಾಗಿದೆ. ಚೀನಾದ ಸಂವಿಧಾನದ ಕಿರುಹೊತ್ತಗೆಯ ವಿನ್ಯಾಸವು ಬೇರೆ ರೀತಿಯೇ ಇದೆ. ಆದ್ದರಿಂದ, ರಾಹುಲ್‌ ಹಿಡಿದಿರುವುದು ಭಾರತದ ಸಂವಿಧಾನವೇ ಆಗಿದೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT