ಗೂಗಲ್ ಲೆನ್ಸ್ ಮೂಲಕ ಚಿತ್ರವನ್ನು ಪರಿಶೀಲನೆ ನಡೆಸಿದಾಗ, ಆ ಚಿತ್ರವನ್ನು ಹಲವರು ಹಂಚಿಕೊಂಡು ಇದೇ ರೀತಿಯ ಪ್ರತಿಪಾದನೆಗಳನ್ನು ಮಾಡಿರುವುದು ಕಂಡುಬಂತು. ಈ ಬಗ್ಗೆ ಹುಡುಕಾಟ ಮುಂದುವರೆಸಿದಾಗ, ನಾಸಾದಲ್ಲಿ ಫೆಬ್ರುವರಿ 13, 2026ರಲ್ಲಿ ಪ್ರಕಟವಾಗಿದ್ದ ಚಿತ್ರ ಅದು ಎಂದು ತಿಳಿಯಿತು. ಚಿತ್ರದ ಕೆಳಗೆ, 2001ರಲ್ಲಿ ಎಲ್ ಸಾಲ್ವಡಾರ್‌ನ ಸಾಂಟಾ ಟೆಕ್ಲಾ ನಗರದಲ್ಲಿ ಭೂಕುಸಿತ ಉಂಟಾಗಿ ಅನೇಕ ಮನೆಗಳು ಮಣ್ಣಿನ ಅಡಿ ಹೂತುಹೋಗಿವೆ ಎಂದು ಉಲ್ಲೇಖಿಸಲಾಗಿತ್ತು. ಎಲ್ ಸಾಲ್ವಡಾರ್‌ನ ಭೂಕುಸಿತದ ಹಳೆಯ ಚಿತ್ರವನ್ನು ವಯನಾಡ್‌ನ ಚಿತ್ರ ಎಂದು ಈಗ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.