ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಕುಂಡ ಬಳಿ ದಿಢೀರ್ ಪ್ರವಾಹ: ಕೊಚ್ಚಿಹೋದ 3 ಅಂಗಡಿಗಳು, 12 ಮಂದಿ ನಾಪತ್ತೆ

Published 4 ಆಗಸ್ಟ್ 2023, 7:16 IST
Last Updated 4 ಆಗಸ್ಟ್ 2023, 7:16 IST
ಅಕ್ಷರ ಗಾತ್ರ

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ ಬಳಿಯ ಜಲಪಾತದಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಮೂರು ಅಂಗಡಿಗಳು ಕೊಚ್ಚಿ ಹೋಗಿದ್ದು, 12 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ ಸುರಿದ ಭಾರಿ ಮಳೆಯ ನಂತರ ದಿಢೀರ್ ಪ್ರವಾಹ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ನಾಪತ್ತೆಯಾದ ಯಾವುದೇ ವ್ಯಕ್ತಿಯೂ ಈವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿ ವಿಮಲ್ ರಾವತ್ ತಿಳಿಸಿದ್ದಾರೆ.

ಭಾರಿ ಮಳೆ ಮತ್ತು ಗುಡ್ಡಗಳಿಂದ ಬೀಳುತ್ತಿರುವ ಬಂಡೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. ನೇಪಾಳದ ಕೆಲವರು ಸೇರಿದಂತೆ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ

ನಾಪತ್ತೆಯಾದವರನ್ನು ವಿನೋದ್ (26), ಮುಲಾಯಂ (25), ಆಶು (23), ಪ್ರಿಯಾಂಶು ಚಮೋಲಾ (18), ರಣಬೀರ್ ಸಿಂಗ್ (28), ಅಮರ್ ಬೋಹ್ರಾ, ಅವರ ಪತ್ನಿ ಅನಿತಾ ಬೊಹ್ರಾ, ಅವರ ಪುತ್ರಿಯರಾದ ರಾಧಿಕಾ ಬೋಹ್ರಾ ಮತ್ತು ಪಿಂಕಿ ಬೊಹ್ರಾ ಎಂದು ಗುರುತಿಸಲಾಗಿದೆ. ಮಕ್ಕಳಾದ ಪೃಥ್ವಿ ಬೋಹ್ರಾ (7), ಜತಿಲ್ (6) ಹಾಗೂ ವಕೀಲ್ (3) ಸಹ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT