ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಎಸಗಿ, ಮದುವೆಗೆ ಪೀಡನೆ: ಅಪ್ರಾಪ್ತನ ವಿರುದ್ದ 14ರ ಬಾಲಕಿಯಿಂದ ದೂರು

Published 4 ಮೇ 2024, 7:18 IST
Last Updated 4 ಮೇ 2024, 7:18 IST
ಅಕ್ಷರ ಗಾತ್ರ

ಥಾಣೆ: ಅಪ್ರಾ‍ಪ್ತನೊಬ್ಬ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ ಮದುವೆಯಾಗಲು ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ 14 ವರ್ಷದ ಬಾಲಕಿಯೊಬ್ಬಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್‌ ಠಾಣೆಯೊಂದರಲ್ಲಿ ಶನಿವಾರ ದೂರು ದಾಖಲಿಸಿದ್ದಾಳೆ.

ಆರೋಪಿ ಬಾಲಕ 2023ರಲ್ಲಿ ಬಾಲಕಿಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಬಳಿಕ ತನಗೆ ಧರ್ಮ, ಜಾತಿಯ ಗೊಡವೆಯಿಲ್ಲ, ನಿನ್ನನ್ನೇ ವಿವಾಹವಾಗುತ್ತೇನೆ ಎಂದು ಹೇಳಿ ಬಾಲಕಿಯ ಮೇಲೆ ಹೇಳಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಸ್ಥಳವೊಂದಕ್ಕೆ ಆಹ್ವಾನಿಸಿದ ಬಳಿಕ ಆರೋಪಿ ಜೊತೆ ಮಾತನಾಡುವುದನ್ನು ಬಾಲಕಿ ನಿಲ್ಲಿಸಿದ್ದಳು. ಸಂಬಂಧ ಮುಂದುವರಿಸದಿದ್ದರೆ ಹಲ್ಲೆ ಮಾಡುವ ಬೆದರಿಕೆಯೂ ಒಡ್ಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೀರಾ ಭಯಂದರ್ ವಸೈ ವಿರಾರ್ ಕಮೀಷನರೇಟ್ ವ್ಯಾಪ್ತಿಯ ಕಾಶಿಗಾಂವ್ ಪೊಲೀಸ್ ಠಾಣೆಯಲ್ಲಿ ಭಾರತೀಯ ಡಂಡ ಸಂಹಿತೆ, ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT