ನವದೆಹಲಿ: ರಾಜಸ್ಥಾನದ ಪೋಖರಣ್ ಪರೀಕ್ಷಾ ವಲಯದಲ್ಲಿ ಮಾರ್ಚ್ 7ರಂದುವಾಯುಪಡೆ ಆಯೋಜಿಸಿರುವ ‘ವಾಯು ಶಕ್ತಿ ಅಭ್ಯಾಸ’ದಲ್ಲಿ 148 ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.

ಇದೇ ಮೊದಲ ಬಾರಿಗೆ ರಫೇಲ್ ಸಹ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘148 ಯುದ್ಧವಿಮಾನಗಳ ಪೈಕಿ 109 ಫೈಟರ್ ಜೆಟ್ಗಳು ಇರಲಿವೆ. ಜಾಗ್ವಾರ್, ಸುಖೋಯ್–30, ಮಿಗ್–29 ಹಾಗೂ ತೇಜಸ್ ಸೇರಿದಂತೆ ವಿವಿಧ ಫೈಟರ್ ಜೆಟ್ಗಳು ಈ ಅಭ್ಯಾಸದಲ್ಲಿ ಪಾಲ್ಗೊಳ್ಳಲಿವೆ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

‘ಆಕಾಶ್’ ಹಾಗೂ ‘ಸ್ಪೈಡರ್’ ಕ್ಷಿಪಣಿ ವ್ಯವಸ್ಥೆಗಳ ಸಾಮರ್ಥ್ಯದ ಪ್ರಾತ್ಯಕ್ಷಿಕೆಯೂ ಇರಲಿದೆ. ಸರಕು ಸಾಗಣೆಗೆ ಬಳಸಲಾಗುವ ವಿಮಾನಗಳಾದ ಸಿ–17 ಹಾಗೂ ಸಿ–130ಜೆ ಸಹ ಈ ಸಮರಾಭ್ಯಸದಲ್ಲಿ ಪಾಲ್ಗೊಳ್ಳಲಿವೆ’ ಎಂದು ತಿಳಿಸಿದ್ದಾರೆ.

ವಾಯುಪಡೆಯು ತನ್ನ ಯುದ್ಧಸನ್ನದ್ಧತೆಯ ಪ್ರದರ್ಶನಕ್ಕಾಗಿ ಮೂರು ವರ್ಷಗಳಿಗೊಮ್ಮೆ ‘ವಾಯು ಶಕ್ತಿ ಅಭ್ಯಾಸ’ವನ್ನು ಆಯೋಜಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.