ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ದೆಹಲಿ ಗಲಭೆ: ಆರು ಮಂದಿ ಖುಲಾಸೆ

Published 8 ಜುಲೈ 2023, 13:27 IST
Last Updated 8 ಜುಲೈ 2023, 13:27 IST
ಅಕ್ಷರ ಗಾತ್ರ

ನವದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಂಗಡಿಗೆ ಬೆಂಕಿ ಹಚ್ಚಿದ್ದ ಮತ್ತು ಮನೆಗೆ ನುಗ್ಗಿ ಲೂಟಿ ಮಾಡಿದ್ದ ಆರೋಪ ಹೊತ್ತಿದ್ದ ಆರು ಮಂದಿಯನ್ನು ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಸಾಹಿಲ್‌, ದಿನೇಶ್‌, ಟಿಂಕು, ಸುದೀಪ್‌, ವಿಕಾಸ್‌ ಕಶ್ಯಪ್‌ ಮತ್ತು ಸೋನು ಎಂಬುವವರನ್ನು ಖುಲಾಸೆಗೊಳಿಸಿ ಆದೇಶಿಸಿದರು. ಗಲಭೆ ವೇಳೆ 2020 ಫೆಬ್ರುವರಿ 24ರ ರಾತ್ರಿ ಮತ್ತು 25ರಂದು ದಾಂಧಲೆ ನಡೆಸಿದ, ಲೂಟಿ ಮಾಡಿದ ಆರೋಪ ಇವರ ಮೇಲಿತ್ತು.

ಆರು ಮಂದಿ ವಿರುದ್ಧ ಗೋಕುಲಪುರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT