ನವದೆಹಲಿ:ಮಾನವಸಹಿತ ಗಗನಯಾನಯೋಜನೆಗೆ ಕೇಂದ್ರದ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆಕಳುಹಿಸುವ ಯೋಜನೆ ಇದಾಗಿದೆ.

₹10 ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಗಗನಯಾನ ಯೋಜನೆ ಅಡಿಯಲ್ಲಿ ಮೂವರು ಗಗನಯಾನಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸಿಕೊಡಲಾಗುವುದು. ಇವರು 7 ದಿನ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಲಿದ್ದಾರೆ. ಇದಕ್ಕಾಗಿ ಇಸ್ರೋ ವಿಶೇಷ ಬಾಹ್ಯಾಕಾಶ ನೌಕೆಯನ್ನು ಸಿದ್ಧ ಪಡಿಸಲಿದೆ.

ಇದನ್ನೂ ಓದಿ:‘ಗಗನಯಾನ’ಕ್ಕೆ ಭಾರತೀಯ ವಾಯುಪಡೆಯಿಂದಲೇ ಆಯ್ಕೆ:ಕೆ. ಶಿವನ್

2022ರಲ್ಲಿ ಭಾರತೀಯ ಗಗನಯಾನಿಗಳು ಬಾಹ್ಯಾಕಾಶ ಯಾತ್ರೆ ನಡೆಸಲಿದ್ದಾರೆ. ಇದಕ್ಕಾಗಿ ಗಗನಯಾನಿಗಳಿಗೆ ಮೂರು ವರ್ಷ ವಿಶೇಷ ತರಬೇತಿ ನೀಡಲಾಗುವುದು.

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟುವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.