ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಕುರಿತು ಚರ್ಚೆ: ಪ್ರತಿಭಟಿಸಿದ ಬಿಜೆಪಿ ಶಾಸಕರನ್ನು ಹೊರಹಾಕಿದ ಮಾರ್ಷಲ್‌ಗಳು

Published 17 ಆಗಸ್ಟ್ 2023, 11:41 IST
Last Updated 17 ಆಗಸ್ಟ್ 2023, 11:41 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಮಣಿ‍ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದನ್ನು ವಿರೋಧಿಸಿ ಗುರುವಾರ ಪ್ರತಿಭಟಿಸಿದ ಬಿಜೆಪಿಯ ನಾಲ್ವರು ಶಾಸಕರನ್ನು ಹೊರಹಾಕಲಾಗಿದೆ.

ಎಎಪಿ ಶಾಸಕ ದುರ್ಗೇಶ್‌ ಪಾಠಕ್‌ ಅವರು ಸದನದಲ್ಲಿ ಮಣಿಪುರಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭಿಸಿದರು. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು. ದೆಹಲಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರವೇ ಚರ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.

ಶಾಸಕರ ಪ್ರತಿಭಟನೆಯನ್ನು ಪ್ರಶ್ನಿಸಿದ ಉಪ ಸಭಾಪತಿ ರಾಖಿ ಬಿರ್ಲಾ, 'ಮಣಿಪುರ ಸಮಸ್ಯೆಯು ಸದನದಲ್ಲಿ ಚರ್ಚಿಸುವಂತಹ ವಿಚಾರವಲ್ಲ ಎಂದು ಭಾವಿಸಿದ್ದೀರಾ. ಉತ್ತರ ಪ್ರದೇಶ ವಿಧಾನಸಭೆಯಲ್ಲಿಯೂ ಮಣಿಪುರ ವಿಚಾರ ಚರ್ಚೆಯಾಗಿದೆ' ಎಂದರು.

ಆದಾಗ್ಯೂ ಬಿಜೆಪಿ ಶಾಸಕರಾದ ಆಭಯ್ ವರ್ಮಾ, ಜಿತೇಂದರ್‌ ಮಹಾಜನ್‌, ಅಜಯ್‌ ಮಹಾವರ್‌ ಮತ್ತು ಒ.ಪಿ. ಶರ್ಮಾ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಮಾರ್ಷಲ್‌ಗಳ ಮೂಲಕ ಅವರನ್ನು ಸದನದಿಂದ ಹೊರಗೆ ಕಳುಹಿಸಲಾಯಿತು.

ಪಾಠಕ್‌ ಅವರು, ಮಣಿಪುರ ವಿಚಾರವಾಗಿ ಚರ್ಚೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು. ಇದೇ ವೇಳೆ ಎಎಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT