‘ಪ್ಯಾನ್ ಕಾರ್ಡ್ಗೆ ಆಧಾರ್ ಸಂಖ್ಯೆ ಜೋಡಿಸಿದ ರೀತಿಯಲ್ಲಿಯೇ ಮತದಾರರ ಗುರುತಿನ ಚೀಟಿಗೂ ಆಧಾರ್ ಸಂಖ್ಯೆ ಜೋಡಿಸಲಾಗುತ್ತದೆ. ಇದು ಕಡ್ಡಾಯವಲ್ಲ. ಆದರೆ, ಆಧಾರ್ ಮಾಹಿತಿ ಮೂಲಕ ಮತದಾರರ ಗುರುತಿನ ಚೀಟಿಯ ಮಾಹಿತಿ ಕಳುವಾಗುವುದನ್ನು ತಡೆಯುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಆಧಾರ್ ಸಂಖ್ಯೆ ಜೋಡಣೆಯಿಂದ, ನಕಲಿ ಗುರುತಿನ ಚೀಟಿಗಳಿಗೆ ಕಡಿವಾಣ ಹಾಕಬಹುದು’ ಎಂದು ಕಾನೂನು ಸಚಿವಾಲಯವು ಹೇಳಿದೆ.