ತಿರುವನಂತಪುರ: ಕೇರಳ ಪೊಲೀಸ್ ಇಲಾಖೆಯ ಮಾದಕ ವಸ್ತು ನಿಗ್ರಹ ಪಡೆಯ ಅಧಿಕಾರಿಗಳು ಕೊಚ್ಚಿಯ ಹೋಟೆಲ್ನ ಮೇಲೆ ಬುಧವಾರ ತಡರಾತ್ರಿ ವೇಳೆ ದಾಳಿ ನಡೆಸಿದ ವೇಳೆ ಮಲಯಾಳ ನಟ ಶೈನ್ ಟಾಮ್ ಚಾಕೊ ಅವರು ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದಾರೆ.

ಹೋಟೆಲ್ನಲ್ಲಿ ಡ್ರಗ್ಸ್ ಸೇವನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಚಾಕೊವನ್ನು ವಶಕ್ಕೆ ಪಡೆಯಲು ಹುಡುಕಾಟ ಆರಂಭಿಸಿದ್ದಾರೆ.

ಹೋಟೆಲ್ನ ಮೂರನೇ ಮಹಡಿಯಲ್ಲಿದ್ದ ಚಾಕೊ ಸೀದಾ ಕಿಟಕಿ ಮೂಲಕ ಜಿಗಿದು, ಎರಡು ಮಹಡಿಗಳನ್ನು ಮೆಟ್ಟಿಲುಗಳ ಮೂಲಕ ಇಳಿದು ಪರಾರಿಯಾಗಿರುವುದು ಸಿ.ಸಿ.ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.

ಡ್ರಗ್ಸ್ ವ್ಯಸನಿಯಾಗಿರುವ ಕಲಾವಿದರೊಬ್ಬರು ಶೂಟಿಂಗ್ ಸೆಟ್ನಲ್ಲೇ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎರಡು ದಿನಗಳ ಹಿಂದಷ್ಟೇ ನಟಿ ವಿನ್ಸಿ ಅಲೋಷಿಯಸ್ ಅವರು ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ಈ ಕುರಿತು ತನಿಖೆಗೂ ಆದೇಶಿಸಲಾಗಿತ್ತು. ದೂರಿನಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವುದು ಚಾಕೊ ಅವರನ್ನೇ ಎಂದು ಹೇಳಲಾಗಿದೆ.

ಕೊಕೇನ್ ಹೊಂದಿದ ಆರೋಪದ ಮೇಲೆ 2015ರಲ್ಲೇ ಚಾಕೊ ಅವರು ಮೇಲೆ ದೂರು ದಾಖಲಿಸಲಾಗಿತ್ತು. ಇತ್ತೀಚಿಗಷ್ಟೇ ಕೊಚ್ಚಿ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.