ಏರ್ ಮಾರ್ಷಲ್ ಎಸ್.ಪ್ರಭಾಕರನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಪಂಕಜ್ ನೇಮಕವಾಗಿದ್ದಾರೆ. ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪದವೀಧರರಾಗಿರುವ ಪಂಕಜ್ ಅವರು 1985ರ ಜೂನ್ನಲ್ಲಿ ಫೈಟರ್ ಪೈಲಟ್ ಆಗಿ ಐಎಎಫ್ಗೆ ನಿಯೋಜನೆಗೊಂಡಿದ್ದರು. 37 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.