ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯ ಎಲ್ಲ ಕೈದಿಗಳಿಗೆ ಬಿಸಿನೀರು, ಹಾಸಿಗೆ!

Published : 9 ಜನವರಿ 2023, 15:40 IST
ಫಾಲೋ ಮಾಡಿ
Comments

ನವದೆಹಲಿ: ರಾಜಧಾನಿಯಲ್ಲಿನ ಕಾರಾಗೃಹಗಳ ಕೈದಿಗಳಿಗೆ ತಕ್ಷಣವೇ ಬಿಸಿನೀರು ಮತ್ತು 65 ವರ್ಷ ಮೇಲ್ಪಟ್ಟ ಕೈದಿಗಳಿಗೆ ಹಾಸಿಗೆ ಸಿಗುತ್ತದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹೇಳಿದ್ದಾರೆ.

ಅಧಿಕಾರಿಗಳೊಂದಿಗಿನ ಪಾಕ್ಷಿಕ ಪರಿಶೀಲನಾ ಸಭೆ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತಕ್ಷಣದಿಂದಲೇ ತಿಹಾರ್, ರೋಹಿಣಿ ಮತ್ತು ಮಂಡೋಲಿಯದ ಎಲ್ಲಾ 16 ಸೆಂಟ್ರಲ್ ಜೈಲುಗಳಲ್ಲಿನ ಕೈದಿಗಳು ತಮ್ಮ ಸ್ನಾನ ಮತ್ತು ನೈರ್ಮಲ್ಯ ಅಗತ್ಯಗಳಿಗಾಗಿ ಬಿಸಿನೀರನ್ನು ಪಡೆಯಲಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕೈದಿಗಳಿಗೆ ಮರದ ಮಂಚದೊಂದಿಗೆ ಹಾಸಿಗೆಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಚಾರಣಾಧೀನ ಕೈದಿಗಳಾಗಿರುವ ಅನೇಕ ಕೈದಿಗಳಿಗೆ ಈ ಕೊರೆಯುವ ಚಳಿಯಲ್ಲೂ ಬಿಸಿನೀರಿನ ಸೌಲಭ್ಯ ಸಿಗುತ್ತಿಲ್ಲ. ಪ್ರಭಾವಿ ಕೈದಿಗಳು ಜೈಲಿನಲ್ಲಿ ಪ್ರತಿ ಬಕೆಟ್‌ಗೆ ₹ 5,000 ನೀಡಿ ಬಿಸಿನೀರಿನ ಸೇವೆ ಪಡೆಯುತ್ತಿದ್ದಾರೆ ಎಂಬ ವಿಷಯ ತಿಳಿದ ಸಕ್ಸೇನಾ, ಎಲ್ಲಾ ಕೈದಿಗಳಿಗೂ ತಕ್ಷಣವೇ ಬಿಸಿನೀರು ಲಭ್ಯವಾಗುವಂತೆ ಡಿಜಿ (ಜೈಲು) ಮತ್ತು ಕಾರ್ಯದರ್ಶಿ (ಗೃಹ) ಅವರಿಗೆ ಸೂಚನೆಗಳನ್ನು ನೀಡಿದ್ದಾರೆ.

‘ಈ ನಿರ್ಧಾರವು ಜೈಲು ಸುಧಾರಣೆ ಜೊತೆಗೆ, ಭ್ರಷ್ಟಾಚಾರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ’ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT