ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರನಾಥಕ್ಕೆ ಪ್ರಯಾಣ ಬೆಳೆಸಿದ 6,619 ಯಾತ್ರಿಕರನ್ನು ಒಳಗೊಂಡ 3ನೇ ತಂಡ

Published 30 ಜೂನ್ 2024, 5:41 IST
Last Updated 30 ಜೂನ್ 2024, 5:41 IST
ಅಕ್ಷರ ಗಾತ್ರ

ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಯಾತ್ರಿಗಳ ಮೂರನೇ ತಂಡ ಭದ್ರತೆಯೂಂದಿಗೆ ಇಂದು (ಭಾನುವಾರ) ಮುಂಜಾನೆ ಪ್ರಯಾಣ ಬೆಳೆಸಿತು.

ಎರಡು ಪ್ರತ್ಯೇಕ ಬೆಂಗಾವಲು ಪಡೆಗಳ ಭದ್ರತೆಯೊಂದಿಗೆ 6,619 ಯಾತ್ರಿಕರನ್ನು ಒಳಗೊಂಡ ತಂಡವು ಪ್ರಯಾಣ ಬೆಳೆಸಿತು. ಇದರಲ್ಲಿ 1,141 ಮಹಿಳೆಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರೆಯ ಮೊದಲ ದಿನವಾದ ಶನಿವಾರ (ಜೂನ್ 19) ಹಿಮಾಲಯದ ಶ್ರೇಣಿಯಲ್ಲಿರುವ ಪವಿತ್ರ ಅಮರನಾಥ ಗುಹೆಗೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಸುಮಾರು 14 ಸಾವಿರ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದರು.

52 ದಿನಗಳ ಪರ್ಯಂತದ ಅಮರನಾಥ ವಾರ್ಷಿಕ ಯಾತ್ರೆಯು ಆಗಸ್ಟ್ 19ರಂದು ಕೊನೆಗೊಳ್ಳಲಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಹಿಮಲಿಂಗ ದರ್ಶನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT