ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದ ಅಮಿತ್ ಶಾ ದಂಪತಿ

Published 31 ಮೇ 2024, 10:32 IST
Last Updated 31 ಮೇ 2024, 10:32 IST
ಅಕ್ಷರ ಗಾತ್ರ

ತಿರುಪತಿ (ಆಂಧ್ರ ಪ್ರದೇಶ): ಲೋಕಸಭೆಯ ಕೊನೆಯ ಹಂತದ ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮಿತ್ ಶಾ ಜೊತೆಗೆ ಪತ್ನಿ ಸೋನಲ್ ಶಾ ಸಹ ತಿರುಪತಿಗೆ ಭೇಟಿ ನೀಡಿದ್ದರು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬಂದ ಅಮಿತ್ ಶಾ ದಂಪತಿ ಅರ್ಧ ಗಂಟೆ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ.

‘ದೇಗುಲದ ಅರ್ಚಕರು ಅಮಿತ್ ಶಾ ದಂಪತಿಯನ್ನು ಆಶೀರ್ವದಿಸಿ, ಡೈರಿ, ಆಯುರ್ವೇದ ಉತ್ಪನ್ನಗಳು, ಲಡ್ಡು ಮತ್ತು ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ’ಎಂದು ವರದಿ ತಿಳಿಸಿದೆ.

ಗುರುವಾರ ತಮಿಳುನಾಡಿನ ಪುದುಕೊಟ್ಟಾಯಿಯ ಕೊಟ್ಟಾಯಿ ಭೈರಾವರ್ ದೇಗುಲದಲ್ಲೂ ಪೂಜೆ ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT