ಅಮಿತ್ ಶಾ ವಿಫಲ ಗೃಹ ಸಚಿವ: ಅಭಿಷೇಕ್ ಬ್ಯಾನರ್ಜಿ
‘ಅಮಿತ್ ಶಾ ಅವರು ದೇಶ ಕಂಡ ಅತ್ಯಂತ ವಿಫಲ ಗೃಹ ಸಚಿವ’ ಎಂದು ತೃಣಮೂಲ ಕಾಂಗ್ರೆಸ್‌ನ ನಾಯಕ ಅಭಿಷೇಕ್ ಬ್ಯಾನರ್ಜಿ ಶನಿವಾರ ಬಣ್ಣಿಸಿದ್ದಾರೆ. ದೇಶದ ಆಂತರಿಕ ಭದ್ರತೆಯನ್ನು ಖಚಿಪಡಿಕೊಳ್ಳುವಲ್ಲಿ ವಿಫಲರಾಗಿರುವ ಅವರು ರಾಜಕೀಯ ವಿರೋಧಿಗಳ ಮೇಲೆ ಆರೋಪಗಳನ್ನು ಮಾಡುವುದರಲ್ಲಿಯೇ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ರಾಜ್ಯಕ್ಕೆ ಬರುವ ಪ್ರವಾಸಿಗ ಅಮಿತ್ ಶಾ ಅವರು ದೊಡ್ಡ ದೊಡ್ಡ ಹೇಳಿಕೆಗಳನ್ನು ಮತ್ತು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಟೀಕಿಸಿದ್ದಾರೆ.