ಅಮರಾವತಿ: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆನ್ಲೈನ್ ವೇದಿಕೆಗಳನ್ನು ನಿರ್ಬಂಧಿಸಲು ಆಂಧ್ರಪ್ರದೇಶ ಸರ್ಕಾರ ಚಿಂತಿಸಿದೆ.

ಆನ್ಲೈನ್ ವೇದಿಕೆಗಳಿಗೆ ಅನ್ವಯವಾಗುವ ಅಸ್ತಿತ್ವದಲ್ಲಿರುವ ಕಾನೂನುಗಳು, ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಲಿಕ್ಕಾಗಿಯೇ ಪ್ರಮುಖ ಸಚಿವರ ಸಮಿತಿಯೊಂದನ್ನು 2025ರ ಅಕ್ಟೋಬರ್ನಲ್ಲೇ ರಚಿಸಲಾಗಿದೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ಶುಕ್ರವಾರ ತಿಳಿಸಿದ್ದಾರೆ.

ಸಮಿತಿ ನೀಡುವ ವರದಿಯನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ (ಐಟಿ) ಸಚಿವ ನಾರಾ ಲೋಕೇಶ್ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಮತ್ತು ಇತರ ಸದಸ್ಯರಿದ್ದಾರೆ.

ದಾವೋಸ್ನಲ್ಲಿರುವ ನಾರಾ ಲೋಕೇಶ್ ಅವರು, ‘ಮಕ್ಕಳಿಗೆ ಆನ್ಲೈನ್ ವೇದಿಕೆಗಳನ್ನು ನಿರ್ಬಂಧಿಸಲು ಆಂಧ್ರಪ್ರದೇಶ ಸರ್ಕಾರ ಚಿಂತಿಸುತ್ತಿದೆ’ ಎಂದು ಹೇಳಿದ್ದು, ತೆಲುಗುದೇಶಂ ಪಕ್ಷವು ಈ ಹೇಳಿಕೆಯನ್ನು ಸ್ವಾಗತಿಸಿದೆ.

ಆಸ್ವ್ರೇಲಿಯಾವು ಈಚೆಗಷ್ಟೇ ಈ ಸಂಬಂಧ ಕಾನೂನು ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.