ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿವ್‌ಗೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ತೊರೆಯುವಂತೆ ಎಬಿವಿಪಿ ಸೂಚನೆ

Last Updated 15 ನವೆಂಬರ್ 2018, 11:39 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಎಬಿವಿಪಿಯ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌) ಅಂಕಿವ್‌ ಬೈಸೊಯಾ ಅವರ ನಕಲಿ ಪದವಿ ಪ್ರಮಾಣಪತ್ರ ನೀಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಅಧ್ಯಕ್ಷ ಸ್ಥಾನ ತೊರೆಯುವಂತೆ ಎಬಿವಿಪಿ ಸೂಚಿಸಿದೆ.

ಅಂಕಿವ್‌ ಬೈಸೊಯಾ ನಕಲಿ ಪದವಿ ಪತ್ರಗಳನ್ನು ನೀಡಿಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದಿದ್ದರು. ಅಂಕಿವ್‌ ನೀಡಿರುವ ಪದವಿ ಪತ್ರಗಳು ನಕಲಿ ಎಂದು ತಿರುವಲ್ಲೂವರ್ ವಿಶ್ವವಿದ್ಯಾಲಯ ವರದಿ ‌‌‌ನೀಡಿರುವುದರಿಂದ ಅವರು ವಿಚಾರಣೆ ಎದುರಿಸಬೇಕಾಗಿದೆ. ಇದರಿಂದ ಮುಜುಗರಕ್ಕೆ ಒಳಗಾಗಿರುವ ಎಬಿವಿಪಿ ಅಂಕಿವ್‌ ಬಸೋಯ ಅವರಿಗೆ ಹುದ್ದೆ ತೊರೆಯುವಂತೆ ಸೂಚಿಸಿದೆ.

ದೆಹಲಿ ಡಿಯುಎಸ್‌ಯು ಅಧ್ಯಕ್ಷ ಅಂಕಿವ್‌ ಬೈಸೊಯಾಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ವಿಚಾರಣೆ ಮುಗಿಯುವವರೆಗೂ ಅವರನ್ನು ಸಂಘಟನೆಯ ಪ್ರಮುಖ ಜವಾಬ್ದಾರಿಗಳಿಂದ ದೂರ ಇರುವಂತೆಯೂ ಸೂಚಿಸಲಾಗಿದೆ ಎಂದು ಎಬಿವಿಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಕಿವ್‌ ಬೈಸೊಯಾ ಅವರ ಪದವಿ ಪತ್ರಗಳನ್ನು ಪರಿಶೀಲಿಸಿ ನವೆಂಬರ್ 20ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಸೋಮವಾರ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT