ಶ್ರೀನಗರ: ಪಾಕಿಸ್ತಾನಿ ಗೈಡ್ ಅನ್ನು ಸೆರೆಹಿಡಿದ ಸೇನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಂಭೀರ್ ಪ್ರದೇಶದ ನಿಯಂತ್ರಣ ರೇಖೆಯ(ಎಲ್ಒಸಿ) ಉದ್ದಕ್ಕೂ ಜೈಶ್ ಎ ಮೊಹಮ್ಮದ್(ಜೆಇಎಂ) ಭಯೋತ್ಪಾದಕ ಸಂಘಟನೆಗೆ ಸೇರಿದ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ಪ್ರಮುಖ ಒಳನುಸುಳುವಿಕೆ ಯತ್ನವನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲಾಗಿದೆ ಎಂದು ತಿಳಿಸಿದೆ.

22 ವರ್ಷದ ಮೊಹಮ್ಮದ್ ಅರಿಬ್ ಅಹ್ಮದ್ ಎಂದು ಗುರುತಿಸಲಾದ ಪಾಕಿಸ್ತಾನಿ ಪ್ರಜೆಯನ್ನು ಭಿಂಬರ್ ಗಲಿ ಸೆಕ್ಟರ್ ಭಾನುವಾರ ಸೆರೆಹಿಡಿಯಲಾಗಿತ್ತು.

ಮುನ್ಸೂಚನೆ ಪಡೆಗಳ ತ್ವರಿತ ಮತ್ತು ನಿರ್ಣಾಯಕ ಕ್ರಮವು ಪ್ರಮುಖ ಗೈಡ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು. ಬಳಿಕ, ಒಳನುಸುಳುವಿಕೆ ಯತ್ನವನ್ನು ಪರಿಣಾಮಕಾರಿಯಾಗಿ ತಡೆಯಲಾಯಿತು ಎಂದು ಸೇನೆ ತಿಳಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಕೋಟ್ಲಿ ಜಿಲ್ಲೆಯ ನಿಕಿಯಾಲ್ ಪ್ರದೇಶದ ಡೆಟೋಟ್ನ ಮೊಹಮ್ಮದ್ ಯೂಸುಫ್ ಅವರ ಪುತ್ರ ಮೊಹಮ್ಮದ್ ಯೂಸುಫ್ ಅವರನ್ನು ಭಾನುವಾರ ಖಚಿತ ಮಾಹಿತಿ ಮೇರೆಗೆ ಸೆರೆಹಿಡಿಯಲಾಗಿದೆ.

ಎಲ್ಒಸಿ ಮೂಲಕ ಭಯೋತ್ಪಾದಕರನ್ನು ಗಡಿಯೊಳಗೆ ನುಗ್ಗಿಸಲು ಹೊಸ ಪ್ರಯತ್ನ ನಡೆಯತ್ತಿರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಸೇನೆಯು ಬಿಎಸ್ಎಫ್ನೊಂದಿಗೆ ಭಾನುವಾರ ಸಂಘಟಿತ ಒಳನುಸುಳುವಿಕೆ ತಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಗಂಭೀರ್ ಪ್ರದೇಶದಲ್ಲಿ ನಾಲ್ವರಿಂದ ಐದು ಮಂದಿ ಶಸ್ತ್ರಸಜ್ಜಿತ ಉಗ್ರರು ಒಳನುಸುಳುವಿಕೆಗೆ ಸಜ್ಜಾಗಿದ್ದನ್ನು ಪತ್ತೆ ಮಾಡಿತ್ತು.

ಈ ಸಂದರ್ಭ ಒಬ್ಬನನ್ನು ಬಂಧಿಸಲಾಗಿದ್ದು, ಆತ ಗೈಡ್ ಎಂದು ಗೊತ್ತಾಗಿದೆ. ಉಳಿದ ನಾಲ್ವರು ತೀವ್ರ ಗಾಯಗೊಂಡು ವಾಪಸ್ ಪಾಕ್ಗೆ ಕಾಲ್ಕಿತ್ತಿದ್ದಾರೆ.

ಇದೇವೇಳೆ, ಪಾಕಿಸ್ತಾನದ ಕರೆನ್ಸಿ, ಮೊಬೈಲ್ ಫೋನ್ ಸೇರಿದಂತೆ ಸೂಕ್ಷ್ಮ ವಸ್ತುಗಳು ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯನ್ನು ಸೇನೆ ತೀವ್ರಗೊಳಿಸಿದೆ.

ಆರಂಭಿಕ ವಿಚಾರಣೆಯ ಸಮಯದಲ್ಲಿ, ಬಂಧಿತ ವ್ಯಕ್ತಿ ತಾನು ಎಲ್ಒಸಿಗೆ ಸಮೀಪವಿರುವ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿದ್ದು, ಪೋಸ್ಟ್ಗಳಲ್ಲಿ ನಿಯೋಜಿಸಲಾದ ಪಾಕಿಸ್ತಾನ ಸೇನಾ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ದೃಢಪಡಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.

ಜೆಇಎಂ ಭಯೋತ್ಪಾದಕರು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸಾಮಗ್ರಿಗಳನ್ನು ಒಳಗೊಂಡಂತೆ ಗಮನಾರ್ಹ ಪ್ರಮಾಣದ ವಸ್ತುಗಳನ್ನು ಸಾಗಿಸುತ್ತಿದ್ದಾರೆ ಎಂದು ವ್ಯಕ್ತಿ ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೆರೆಹಿಡಿಯಲಾದ ಗೈಡ್ ಅನ್ನು ಪ್ರಸ್ತುತ ಜಂಟಿ ವಿಚಾರಣಾ ತಂಡವು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ ಎಂದೂ ಹೇಳಿದ್ದಾರೆ.
.ಟ್ರಂಪ್, ನೆತನ್ಯಾಹು ಪಶ್ಚಾತ್ತಾಪ ಪಡುವಂತೆ ಮಾಡಿ: ಇರಾನ್ ಧರ್ಮಗುರು ಫತ್ವಾ.ನಟಿ ಶೆಫಾಲಿ ಸಾವಿಗೆ ಏನು ಕಾರಣ? ವೈದ್ಯರು ಹೇಳಿದ್ದಿಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.