ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಡ್ರೋನ್‌ ಮೇಲೆ ಗುಂಡಿನ ದಾಳಿ

Published 12 ಫೆಬ್ರುವರಿ 2024, 15:54 IST
Last Updated 12 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಮೆಂಧರ್‌/ ಜಮ್ಮು : ‘ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋನ್‌ವೊಂದರ ಮೇಲೆ ಭಾರತ ಸೇನೆ ಗುಂಡು ಹಾರಿಸಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

‘ಭಾನುವಾರ ತಡರಾತ್ರಿ ಮೆಂಧರ್‌ನ ಮಾನ್‌ಕೋಟೆ ಪ್ರದೇಶದಲ್ಲಿ ಡ್ರೋನ್‌ ಹಾರಾಡುತ್ತಿರುವುದನ್ನು ಎಲ್ಒಸಿಯಲ್ಲಿ ಪಹರೆಯಲ್ಲಿದ್ದ ಸೇನೆ ಗಮನಿಸಿದೆ. ಕೂಡಲೇ ಆ ಡ್ರೋನ್‌ನತ್ತ ಮೂರು ಸುತ್ತಿನ ಗುಂಡು ಹಾರಿಸಿದ್ದು, ಆಗ ಡ್ರೋನ್‌ ಪಾಕಿಸ್ತಾನದ ಕಡೆಗೆ ಮರಳಿದೆ. ಸದ್ಯ ಮಾನ್‌ಕೋಟೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT