ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

13 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ: ಪಶ್ಚಿಮ ಬಂಗಾಳ, ಉತ್ತರಾಖಂಡದಲ್ಲಿ ಹಿಂಸಾಚಾರ

Published 10 ಜುಲೈ 2024, 15:34 IST
Last Updated 10 ಜುಲೈ 2024, 15:34 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದ ಕೆಲವೆಡೆ ಹಿಂಸಾಚಾರ ಘಟನೆಗಳ ನಡುವೆಯೇ, ಬುಧವಾರ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಿತು. 

ಬುಧವಾರ ರಾತ್ರಿ 7.30ರ ವೇಳೆಗೆ  ಮಧ್ಯಪ್ರದೇಶದ ಅಮರವಾಡ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು ಶೇ 78.71ರಷ್ಟು ಮತದಾನವಾಗಿದೆ. ಶೇ 77.73ರಷ್ಟು ಮತದಾನ ದಾಖಲಾದ ತಮಿಳುನಾಡಿನ ವಿಕ್ರವಂಡಿ ಕ್ಷೇತ್ರವು ಅತಿಹೆಚ್ಚು ಮತದಾನವಾದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಉತ್ತರಾಖಂಡದ ಬದ್ರಿನಾಥ್ ಕ್ಷೇತ್ರದಲ್ಲಿ ಶೇ 47.68ರಷ್ಟು ಮತದಾನವಾಗಿರುವುದು ಅತ್ಯಂತ ಕನಿಷ್ಠ ಮತದಾನದ ಪ್ರಮಾಣ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳು, ಹಿಮಾಚಲ ಪ್ರದೇಶದ ಮೂರು, ಉತ್ತರಾಖಂಡದ ಎರಡು, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ ಮತ್ತು ಬಿಹಾರದ ತಲಾ ಒಂದು ಸೇರಿದಂತೆ ಒಟ್ಟಾರೆ 13 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು.

ಪಶ್ಚಿಮ ಬಂಗಾಳದ ಬಗದಾಹ್ ಮತ್ತು ರಣಘಾತ್ ದಕ್ಷಿಣ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ವರದಿಯಾಗಿವೆ. ಬಿಜೆಪಿ ಅಭ್ಯರ್ಥಿಗಳಾದ ಮನೋಜ್ ಕುಮಾರ್ ಬಿಸ್ವಾಸ್ (ರಣಘಾಟ್ ದಕ್ಷಿಣ) ಮತ್ತು ಬಿನಯ್ ಕುಮಾರ್ ಬಿಸ್ವಾಸ್ (ಬಗದಾಹ್) ಅವರು, ತಮಗೆ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಲು ಟಿಎಂಸಿ ಬಿಡಲಿಲ್ಲ ಎಂದು ದೂರಿದ್ದಾರೆ. ಆದರೆ, ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ. 

ಉತ್ತರಾಖಂಡದ ಮಂಗಲೌರದಲ್ಲಿರುವ ಮತಗಟ್ಟೆ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಹಿಂಸಾಚಾರವನ್ನು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT