ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೊಹಲ್ಲಾ ಕ್ಲಿನಿಕ್‌ಗೆ ಬಾನ್ ಕಿ ಮೂನ್‌ ಭೇಟಿ

ಆರೋಗ್ಯ ಸೇವೆ ಸೌಲಭ್ಯಕ್ಕೆ ಪ್ರಶಂಸೆ
Last Updated 7 ಸೆಪ್ಟೆಂಬರ್ 2018, 13:04 IST
ಅಕ್ಷರ ಗಾತ್ರ

ನವದೆಹಲಿ: ಆಮ್ ಆದ್ಮಿ ‍ಪಾರ್ಟಿ ಸರ್ಕಾರದ ‘ಮೊಹಲ್ಲಾ ಕ್ಲಿನಿಕ್’ ಜನಪ್ರಿಯವಾಗುತ್ತಿದೆ. ರಾಜಧಾನಿಯ ಒಂದು ಕ್ಲಿನಿಕ್‌ಗೆ ವಿಶ್ವಸಂಸ್ಥೆಯ ನಿವೃತ್ತ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಮತ್ತು ನಾರ್ವೆ ಪ್ರಧಾನಿ ಗ್ರೊ ಹಾರ್ಲೆಂ ಬ್ರುಂಟ್‌ಲ್ಯಾಂಡ್‌ ಭೇಟಿ ನೀಡಿ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

‘ಕ್ಲಿನಿಕ್ ಸೇವೆ ನೋಡಿ ತುಂಬಾ ಖುಷಿಯಾಯಿತು’ ಎಂದು ಪೇರಾಗರಿ ಎಂಬಲ್ಲಿನ ಕ್ಲಿನಿಕ್‌ ಭೇಟಿ ನಂತರ ಮೂನ್‌ ಹೇಳಿದರು. ಇವರೊಂದಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಹ ಇದ್ದರು.

‘ಈ ರೀತಿಯ ಕ್ಲಿನಿಕ್‌ಗಳನ್ನು ದೇಶದಾದ್ಯಂತ ವಿಸ್ತರಣೆ ಮಾಡಬೇಕು’ಎಂದು ಗ್ರೊ ಹಾರ್ಲೆಂ ಹೇಳಿದರು. ಹಾರ್ಲೆಂ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

‘ನಗರದಲ್ಲಿ ಸದ್ಯ 189 ಮೊಹಲ್ಲಾ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಿವೆ. ಇನ್ನೂ ಕೆಲವು ತಿಂಗಳಲ್ಲಿ ಇವುಗಳ ಸಂಖ್ಯೆ 1000 ಕ್ಕೆ ಏರಿಕೆಯಾಗಲಿದೆ’ ಎಂದು ಕೇಜ್ರಿವಾಲ್ ಹೇಳಿದರು.

ಏನಿದು ಮೊಹಲ್ಲಾ ಕ್ಲಿನಿಕ್‌ ?
ಇವು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿದ್ದು ಔಷಧಿ, ರೋಗಪತ್ತೆ, ವೈದ್ಯರ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಇವುಗಳನ್ನು ದೆಹಲಿಯಲ್ಲಿ ಮೊದಲ ಬಾರಿಗೆ 2015ರಲ್ಲಿ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT