ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆ: ಜಮ್ಮುವಿನಿಂದ ಹೊರಟ ಮತ್ತೊಂದು ಭಕ್ತರ ಗುಂಪು

Published 16 ಜುಲೈ 2023, 11:18 IST
Last Updated 16 ಜುಲೈ 2023, 11:18 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ‘ಅಮರನಾಥನ ದರ್ಶನ ಪಡೆಯಲು 6,684 ಭಕ್ತರ ಮತ್ತೊಂದು ಗುಂಪು ಬಿಗಿ ಭದ್ರತೆಯ ನಡುವೆ ಭಾನುವಾರ ಬೆಳಿಗ್ಗೆ ಜಮ್ಮುವಿನಿಂದ ಹೊರಟಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘241 ವಾಹನಗಳ ಬೆಂಗಾವಲು ಪಡೆಯೊಂದಿಗೆ, ಭಗವತಿನಗರದ ಮೂಲ ಶಿಬಿರದಿಂದ ಯಾತ್ರಾರ್ಥಿಗಳ 14ನೇ ತಂಡ ಅಮರನಾಥದತ್ತ ಹೊರಟಿದೆ’ ಎಂದು ಹೇಳಿದರು.

‘ನಿರಂತರ ಮಳೆಯಿಂದ ರಸ್ತೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಬೆಂಗಾವಲು ಪಡೆಗಳು ಎರಡು ಮೂಲ ಶಿಬಿರಗಳಾದ ಅನಂತನಾಗ್‌ನ ಪಹಲ್ಗಾಂ ಮತ್ತು ಗಂದರ್‌ಬಾಲ್ ಜಿಲ್ಲೆಯ ಬಲ್ಟಾಲ್‌ಗೆ ಹೊರಟಿವೆ. 3,686 ಭಕ್ತರು 132 ವಾಹನಗಳಲ್ಲಿ ಪಹಲ್ಗಾಂನ ಶಿಬಿರಕ್ಕೆ ಹಾಗೂ 2,998 ಭಕ್ತರು 109 ವಾಹನಗಳಲ್ಲಿ ಬಾಲ್ಟಲ್‌ ಶಿಬಿರಕ್ಕೆ ಹೊರಟಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದರು.

ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 2.10 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT