ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆಯತ್ತ ರಾಹುಲ್; ಜಾರ್ಖಂಡ್‌ನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ರದ್ದು

Published 14 ಫೆಬ್ರುವರಿ 2024, 5:18 IST
Last Updated 14 ಫೆಬ್ರುವರಿ 2024, 5:18 IST
ಅಕ್ಷರ ಗಾತ್ರ

ರಾಂಚಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ 2ನೇ ಹಂತದ 'ಭಾರತ ಜೋಡೊ ನ್ಯಾಯ ಯಾತ್ರೆ'ಯನ್ನು ಜಾರ್ಖಂಡ್‌ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಹುಲ್ ತೆರಳಿರುವುದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ರಾಹುಲ್ ಗಾಂಧಿ ಅವರು ಛತ್ತೀಸಗಢದಿಂದ ಜಾರ್ಖಂಡ್‌ಗೆ ಗರ್ಹಾವ ಜಿಲ್ಲೆಯ ಮೂಲಕ ಬರಬೇಕಿತ್ತು. ಎರಡನೇ ಹಂತದ ಯಾತ್ರೆಗೆ ಇಂದು ದಿನಾಂಕ ನಿಗದಿಯಾಗಿತ್ತು.

'ಮಂಗಳವಾರ ತಡರಾತ್ರಿ ಕೈಗೊಂಡ ನಿರ್ಧಾರದಂತೆ, ಜಾರ್ಖಂಡ್‌ನಲ್ಲಿ ನಡೆಯಬೇಕಿದ್ದ ಭಾರತ್‌ ಜೋಡೊ ನ್ಯಾಯ ಯಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಕಾಂಗ್ರೆಸ್‌ ವಕ್ತಾರೆ ಸೋನಲ್‌ ಶಾಂತಿ ತಿಳಿಸಿದ್ದಾರೆ.

ಯಾತ್ರೆಯು ಜಾರ್ಖಂಡ್‌ನಿಂದ ಪುನರಾರಂಭಗೊಳ್ಳುವುದು ಅಸಂಭವವಾಗಿದೆ. ಆದರೆ, ಗರ್ಹಾವ ಜಿಲ್ಲೆಯ ರಂಕಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರೊಂದಿಗೆ ನಿಗದಿಯಾಗಿದ್ದ ಮಾತುಕತೆಯನ್ನು ಜೈರಾಮ್ ರಮೇಶ್‌ ಹಾಗೂ ಇನ್ನಿತರ ನಾಯಕರು ನಡೆಸಿಕೊಡಲಿದ್ದಾರೆ ಎಂದೂ ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ನಡೆದ 1ನೇ ಹಂತದ ಯಾತ್ರೆಯನ್ನು ರಾಹುಲ್‌ ಮುನ್ನಡೆಸಿದ್ದರು. ಪಶ್ಚಿಮ ಬಂಗಾಳ ಮೂಲಕ ಫೆಬ್ರುವರಿ 2ರಂದು ಜಾರ್ಖಂಡ್‌ಗೆ ಕಾಲಿಟ್ಟಿದ್ದ ಯಾತ್ರೆಯು, ಫೆಬ್ರುವರಿ 6ರಂದು ಒಡಿಶಾ ತಲುಪಿತ್ತು. ಇಂದು ಯಾತ್ರೆ ಸ್ಥಗಿತಗೊಳ್ಳದಿದ್ದರೆ, ಫೆಬ್ರುವರಿ 15ರಂದು ಬಿಹಾರ ತಲುಪುವವರೆಗೂ ರಾಹುಲ್‌ ಗಾಂಧಿ ಜಾರ್ಖಂಡ್‌ನಲ್ಲೇ ಉಳಿಯುತ್ತಿದ್ದರು.

ಮಣಿಪುರದಿಂದ ಜನವರಿ 14ರಂದು ಆರಂಭವಾಗಿರುವ 'ಭಾರತ ಜೋಡೊ ನ್ಯಾಯ ಯಾತ್ರೆ'ಯು 67 ದಿನಗಳವರೆಗೆ 6,713 ಕಿ.ಮೀ ದೂರ ಸಾಗಲಿದೆ. ಮಾರ್ಚ್‌ 20ರಂದು ಮುಂಬೈ ತಲುಪುವ ಮುನ್ನ 15 ರಾಜ್ಯಗಳ 110 ಜಿಲ್ಲೆಗಳನ್ನು ಹಾದುಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT