ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಬಿಗ್‌ಬಾಸ್ ವಿಜೇತನ ವಿರುದ್ಧ ಎಫ್‌ಐಆರ್

Published 3 ನವೆಂಬರ್ 2023, 9:47 IST
Last Updated 3 ನವೆಂಬರ್ 2023, 9:47 IST
ಅಕ್ಷರ ಗಾತ್ರ

ನವದೆಹಲಿ: ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಆರೋಪದ ಮೇಲೆ ಪಾರ್ಟಿ ಆಯೋಜಿಸಿದ್ದ ಯೂಟ್ಯೂಬರ್ ಮತ್ತು ಹಿಂದಿಯ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗೆ ಹಾವು ಮತ್ತು ಹಾವಿನ ವಿಷ ಸರಬರಾಜು ಮಾಡಿದ ಆರೋಪ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದೆಹಲಿಯ ಹಲವು ಫಾರ್ಮ್‌ಹೌಸ್‌ಗಳು ಮತ್ತು ದೆಹಲಿಗೆ ಹೊಂದಿಕೊಂಡ ಪ್ರದೇಶಗಳಲ್ಲೂ ರೇವ್ ಪಾರ್ಟಿ ನಡೆಸಲಾಗುತ್ತಿದೆ ಎಂದು ಬಂಧಿತರು ಪೊಲೀಸರಿಗೆ ತಿಳಿಸಿದ್ದಾರೆ. ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ವಿಡಿಯೊಗಳಿಗಾಗಿ ಹಾವುಗಳನ್ನು ಬಳಸುತ್ತಾರೆ ಎಂದೂ ಅವರು ಹೇಳಿದ್ದಾರೆ.

ಎಲ್ವಿಶ್ ಯಾದವ್ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಐವರನ್ನು ಬಂಧಿಸಲಾಗಿದೆ. ಎಲ್ವಿಶ್ ಯಾದವ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಐದು ನಾಗರಹಾವು ಸೇರಿ 9 ಹಾವುಗಳು ಮತ್ತು ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಎನ್‌ಜಿಒ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸಂಘಟನೆಯ ದೂರಿನ ಮೇರೆಗೆ ಗುರುವಾರ ರಾತ್ರಿ ನೋಯ್ಡಾದ ಸೆಕ್ಟರ್ 51ರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಆತನನ್ನು(ಎಲ್ವಿಶ್ ಯಾದವ್) ತಕ್ಷಣವೇ ಬಂಧಿಸಬೇಕು. ಇದು ಗ್ರೇಡ್-1 ಅಪರಾಧ. ಅಂದರೆ ಏಳು ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯು ಬಲೆ ಬೀಸಿ ಅವನನ್ನು ಹಿಡಿದಿದೆ. ಅವನ ವಿಡಿಯೊಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳನ್ನು ಬಳಸುತ್ತಾನೆ. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಹಾವಿನ ವಿಷವನ್ನು ಮಾರಾಟ ಮಾಡುತ್ತಾನೆ ಎಂದು ನಮಗೆ ತಿಳಿಯಿತು’ ಎಂದು ಬಿಜೆಪಿ ಸಂಸದೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸಂಘಟನೆಯ ಸಂಸ್ಥಾಪಕಿ ಮೇನಕಾ ಗಾಂಧಿ ಹೇಳಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT