ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌: 24ನೇ ಸ್ಥಾನಕ್ಕೇರಿದ ಮಣಿಕಾ

ಟೇಬಲ್‌ ಟೆನಿಸ್‌ ಮಹಿಳಾ ಸಿಂಗಲ್ಸ್ ವಿಶ್ವ ಕ್ರಮಾಂಕ
Published 14 ಮೇ 2024, 14:01 IST
Last Updated 14 ಮೇ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ‘ಸೌದಿ ಸ್ಮ್ಯಾಶ್‌’ ಟೂರ್ನಿಯಲ್ಲಿ ತೋರಿದ ಉತ್ತಮ ಸಾಧನೆಯಿಂದ ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಅವರು ವಿಶ್ವ ಕ್ರಮಾಂಕದಲ್ಲಿ 24ನೇ ಸ್ಥಾನಕ್ಕೆ ಏರಿ ಜೀವನ ಶ್ರೇಷ್ಠ ಸಾಧನೆ ದಾಖಲಿಸಿದರು. ವಿಶ್ವದ ಅಗ್ರ –25 ರಲ್ಲಿ ಸ್ಥಾನ ಪಡೆದ ಭಾರತದ ಮೊದಲ ಆಟಗಾರ್ತಿ ಎಂಬ ಶ್ರೇಯಸ್ಸು ಅವರದಾಯಿತು.

ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತೆಯಾಗಿರುವ ಮಣಿಕಾ, ಜೆಡ್ಡಾದಲ್ಲಿ ಕಳೆದ ವಾರ ನಡೆದಸೌದಿ ಸ್ಮ್ಯಾಶ್‌ ಟೂರ್ನಿಗೆ ಮೊದಲು 39ನೇ ಸ್ಥಾನದಲ್ಲಿದ್ದರು. ಅಲ್ಲಿ ಅಗ್ರ ಆಟಗಾರ್ತಿಯರ ವಿರುದ್ಧ ಗಳಿಸಿದ ಗೆಲುವುಗಳಿಂದ 15 ಸ್ಥಾನ ಜಿಗಿತ ಕಂಡಿದ್ದಾರೆ. ಮಣಿಕಾ ಆ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಭಾರತದ ಆಟಗಾರ್ತಿಯೊಬ್ಬರು ಈ ಹಿಂದೆ ಎಂದೂ ಎಂಟರ ಘಟ್ಟ ತಲುಪಿರಲಿಲ್ಲ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ಈ ಸಾಧನೆ ಅವರ ವಿಶ್ವಾಸವನ್ನು ವೃದ್ಧಿಸಲಿದೆ. ‘ಟಾಪ್‌–25 ರೊಳಗೆ ಸ್ಥಾನ ಪಡೆದು ಜೀವನ ಶ್ರೇಷ್ಠ ಸಾಧನೆಯು ಒಲಿಂಪಿಕ್‌ ಕ್ರೀಡೆಗಳಿಗೆ ನನ್ನ ತಯಾರಿಯನ್ನು ಖಂಡಿತಕ್ಕೂ ಉತ್ತೇಜನಕಾರಿ ಆಗಲಿದೆ’ ಎಂದು ಅವರು ಹೇಳಿದ್ದಾರೆ.

‘ಮುಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ ಸಮೀಪಿಸುತ್ತಿರುವಾಗ ಇಂಥ ಪ್ರದರ್ಶನ ಮುಂದುವರಿಸಿ ದೇಶ ಹೆಮ್ಮೆಪಡುವಂತೆ ಮಾಡಲು ಮತ್ತು ರ್‍ಯಾಂಕಿಂಗ್‌ನಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಪ್ರೇರಣೆ ದೊರೆತಿದೆ. ಸುಧಾರಣೆ ನಿರಂತರ ಪ್ರಕ್ರಿಯೆ. ನಾನು ಅದಕ್ಕೆ ಬದ್ಧಳಾಗಿದ್ದೇನೆ’ ಎಂದಿದ್ದಾರೆ.

ಇದಕ್ಕೆ ಮೊದಲು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಬಾತ್ರಾ, ತಮ್ಮ ಕೋಚ್‌ ಅಮನ್‌ ಬಾಲ್ಗಿಯು ಮತ್ತು ಅಭ್ಯಾಸದ ಜೊತೆಗಾರ ಕಿರಿಲ್‌ ಬಾರ್ಬಾನೋವ್ ಅವರಿಗೆ ಧನ್ಯವಾದ ಹೇಳಿದ್ದರು.

2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಣಿಕಾ, ಕಳೆದ ವರ್ಷ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಸಿಂಗಲ್ಸ್‌ ಎಂಟರ ಘಟ್ಟ ತಲುಪಿ ಗಮನ ಸೆಳೆದಿದ್ದರು.

ಮಣಿಕಾ ಬಾತ್ರಾ

ಮಣಿಕಾ ಬಾತ್ರಾ

ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT