ಆದರೆ, ರಾಜಾಸಿಂಗ್ ಅವರ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದು,‘ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜಾಸಿಂಗ್ ತಮ್ಮ 200 ಬೆಂಬಲಿಗರೊಂದಿಗೆಜುಮಾರತ್ ಬಜಾರ್‌ನಲ್ಲಿ ರಾಣಿ ಅವಂತಿ ಬಾಯಿ ಅವರ ಪ್ರತಿಮೆ ಮರು ಪ್ರತಿಷ್ಠಾಪಿಸಲು ಯತ್ನಿಸಿದರು. ಆದರೆ, ಇದಕ್ಕಾಗಿ ಅವರು ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.