ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಿಂದ ಬಂದ ಡ್ರೋನ್ ಬಿಎಸ್ಎಫ್ ವಶ

Published 8 ಜನವರಿ 2024, 20:36 IST
Last Updated 8 ಜನವರಿ 2024, 20:36 IST
ಅಕ್ಷರ ಗಾತ್ರ

ಜೈಸಲ್ಮೇರ್: ಭಾರತ–ಪಾಕಿಸ್ತಾನದ ಗಡಿಯಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. 

ಜೈಸಲ್ಮೇರ್ ಜಿಲ್ಲೆಯ ಶಹಗಢ ಪ್ರದೇಶದ ಖಾರಿಯ ಗಡಿಯಲ್ಲಿ ಶನಿವಾರ ಸಂಜೆ ಪಾಕಿಸ್ತಾನದಿಂದ ಬಂದ ಈ ಡ್ರೋನ್ ಭಾರತದ ಗಡಿ ದಾಟುತ್ತಿತ್ತು. ಈ ವೇಳೆ ಬಿಎಸ್ಎಫ್ ಯೋಧರು ಅದನ್ನು ವಶಕ್ಕೆ ಪಡೆದರು. ಡ್ರೋನ್‌ಗೆ ಸತ್ತ ಪಾರಿವಾಳ ಮತ್ತು ಸಣ್ಣ ಪ್ಯಾರಾಚೂಟ್ ಅಳವಡಿಸಲಾಗಿದ್ದು, ತನಿಖೆಗಾಗಿ ದೆಹಲಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಶಹಗಢ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT