ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವರ್ಷ ‘ಹೈದರಾಬಾದ್‌ ವಿಮೋಚನಾ ದಿನ’ ಆಚರಣೆ: ಕೇಂದ್ರ ಘೋಷಣೆ

Published 13 ಮಾರ್ಚ್ 2024, 0:26 IST
Last Updated 13 ಮಾರ್ಚ್ 2024, 0:26 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್‌ 17ರಂದು ‘ಹೈದರಾಬಾದ್‌ ವಿಮೋಚನಾ ದಿನ’ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ.

‘ಸೆ.17ರಂದು ಹೈದರಾಬಾದ್‌ ವಿಮೋಚನಾ ದಿನ ಎಂಬುದಾಗಿ ಆಚರಿಸುವಂತೆ ಆ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆ ಭಾಗದ ವಿಮೋಚನೆಗೆ ಹೋರಾಡಿ, ಹುತಾತ್ಮರಾದವರ ಸ್ಮರಣಾರ್ಥ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಲಭಿಸಿದ 13 ತಿಂಗಳ ನಂತರವೂ ಆಗಿನ ಹೈದರಾಬಾದ್‌ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ‘ಆಪರೇಷನ್‌ ಪೋಲೊ’ ಹೆಸರಿನ ಪೊಲೀಸ್‌ ಕ್ರಮದ ಬಳಿಕ 1948ರ ಸೆಪ್ಟೆಂಬರ್‌ 17ರಂದು ಈ ಪ್ರದೇಶವು ನಿಜಾಮನ ಆಳ್ವಿಕೆಯಿಂದ ವಿಮೋಚನೆ ಪಡೆಯಿತು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT