ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan–3: ಲ್ಯಾಂಡರ್‌ನಿಂದ ಹೊರಬಂದ ರೋವರ್‌, ಚಂದ್ರನ ಮೇಲೆ ಚಲನೆ ಆರಂಭ

Published 24 ಆಗಸ್ಟ್ 2023, 3:26 IST
Last Updated 24 ಆಗಸ್ಟ್ 2023, 3:26 IST
ಅಕ್ಷರ ಗಾತ್ರ

ಚೆನ್ನೈ: ಚಂದ್ರನ ಮೇಲ್ಮೈ ಮೇಲೆ ವಿಕ್ರಮ್‌ ಲ್ಯಾಂಡರ್‌ ಬುಧವಾರ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಇದೀಗ ಮುಂದಿನ ಹಂತ ಆರಂಭವಾಗಿದೆ.

ಅಂದರೆ ಪ್ರಗ್ಯಾನ್‌ ರೋವರ್‌ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದಿದ್ದು, ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಗುರುವಾರ ಇಸ್ರೊ ಟ್ವೀಟ್‌ ಮಾಡಿದೆ. 

ಚಂದ್ರಯಾನ-3 ಚಂದ್ರನ ಮೇಲೆ ತನ್ನ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ ಯಶಸ್ವಿ ಮುಂದಿನ ಹಂತವನ್ನು  ಆರಂಭಿಸಿದೆ.

ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ನಿಯೋಜಿಸಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT