ಮುಂಬೈ: ‘ಅನ್ಯಾಯದ ವಿರುದ್ಧ ಹೋರಾಡಲು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳೇ ಸ್ಫೂರ್ತಿ ನೀಡುತ್ತವೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಗುರುವಾರ ಅವರಿಗೆ ಗೌರವ ನಮನ ಸಲ್ಲಿಸಿದರು.

‘ಶೌರ್ಯದ ಪ್ರತಿರೂಪವೇ ಶಿವಾಜಿ ಮಹಾರಾಜರು. ಧೈರ್ಯ, ದೂರದೃಷ್ಟಿ ಮತ್ತು ನ್ಯಾಯಯುತ ನಾಯಕತ್ವಕ್ಕೆ ಅವರೊಂದು ಉತ್ತಮ ಮಾದರಿ’ ಎಂದು ರಾಹುಲ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

‘ಶಿವಾಜಿ ಅವರು ಸಾಮಾನ್ಯ ಜನರ ಹೃದಯದಲ್ಲಿ ಸ್ವಾಭಿಮಾನದ ಕಿಡಿಯನ್ನು ಹಚ್ಚಿದರು. ಅವರಿಂದಲೇ ಮಹಿಳಾ ಶಕ್ತಿಯನ್ನು ಗೌರವಿಸುವ ಸಂಸ್ಕೃತಿ ಉಳಿದಿರುವುದು’ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಜ್ಯಪಾಲ ಆರ್ಚಾಯ ದೇವವ್ರತ್ ಅವರು ಲೋಕ ಭವನದಲ್ಲಿರುವ ಶಿವಾಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಮತ್ತು ಸುನೇತ್ರಾ ಪವಾರ್ ಅವರು ಶಿವಾಜಿಯ ಜನ್ಮಸ್ಥಳವಾದ ಪುಣೆಯ ಶಿವನೇರಿ ಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.