ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆಗಮನ: ದ್ವಿಪಕ್ಷೀಯ ಚರ್ಚೆ ಸಂಭವ

Last Updated 24 ಮಾರ್ಚ್ 2022, 16:00 IST
ಅಕ್ಷರ ಗಾತ್ರ

ನವದೆಹಲಿ : ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಗುರುವಾರ ರಾಜಧಾನಿಗೆ ಆಗಮಿಸಿದ್ದು, ವಿದೇಶಾಂಗ ಸಚಿವರ ಜೊತೆಗೆ ಚರ್ಚಿಸುವ ಸಂಭವವಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಗಡಿ ಭಾಗದಲ್ಲಿ ಸೇನೆಗಳ ನಡುವಿನ ಸಂಘರ್ಷದಿಂದಾಗಿ ಉಭಯ ದೇಶಗಳ ಬಾಂಧವ್ಯವು ಮುಸುಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸುಮಾರು ಎರಡು ವರ್ಷದ ತರುವಾಯ ಚೀನಾದ ಉನ್ನತ ಪ್ರತಿನಿಧಿಯೊಬ್ಬರ ಪ್ರಥಮ ಭೇಟಿ ಇದಾಗಿದೆ.

ಭಾರತ ಸರ್ಕಾರ ಈ ಕುರಿತು ಅಧಿಕೃತವಾಗಿ ದೃಢಪಡಿಸಿಲ್ಲ. ಕಾಶ್ಮೀರದ ವಿವಾದಿತ ಪ್ರದೇಶ ಕುರಿತಂತೆ ಚೀನಾದ ಸಚಿವರು ಕಳೆದ ವಾರ ಪಾಕಿಸ್ತಾನದಲ್ಲಿ ನೀಡಿದ್ದ ಹೇಳಿಕೆಯನ್ನು ಭಾರತ ಕಟುವಾಗಿ ಖಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT