ಬೆಂಗಳೂರು: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಈ ಹಬ್ಬ ಸಂಕೇತಿಸುತ್ತದೆ. ಉತ್ತಮ ಸಮಾಜ ನಿರ್ಮಿಸಲು ಹಾಗೂ ಅಭಿವೃದ್ಧಿ ಕಡೆಗೆ ಕೆಲಸ ಮಾಡೋಣ. ಯೇಸು ಕ್ರಿಸ್ತನ ಬೋಧನೆಗಳನ್ನು ಸದಾ ನೆನಪಿಸಿಕೊಳ್ಳೋಣ’ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Wishing everyone a Merry Christmas! May this festive season bring joy, peace and prosperity to all. Let’s celebrate the spirit of harmony and compassion that Christmas symbolizes, and work towards a world where everyone is happy and healthy. We also recall the noble teachings of…
— Narendra Modi (@narendramodi) December 25, 2023
‘ನಿಮ್ಮ ಹೃದಯ ಪ್ರೀತಿಯಿಂದ, ನಿಮ್ಮ ಮನೆ ಸಂತೋಷದಿಂದ ಹಾಗೂ ನಿಮ್ಮ ಜೀವನವು ಶಾಂತಿಯಿಂದ ತುಂಬಿರಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭ ಕೋರಿದ್ದಾರೆ
Merry Christmas!
— Rahul Gandhi (@RahulGandhi) December 25, 2023
May your hearts be filled with love, your homes with happiness, and your lives with peace. pic.twitter.com/qJmwNGixde
‘ಯೇಸು ಕ್ರಿಸ್ತನ ಜೀವನ ಸಂದೇಶಗಳಾದ ಪ್ರೀತಿ, ಕ್ಷಮೆ, ದಯಾಗುಣಗಳು ಎಲ್ಲರ ಬದುಕಿಗೆ ದಾರಿದೀಪವಾಗಲಿ. ಸುಖ, ಶಾಂತಿ, ಸಮೃದ್ಧಿ ನಾಡಿನಲ್ಲಿ ತುಂಬಿರಲಿ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಏಸು ಕ್ರಿಸ್ತನ ಜೀವನ ಸಂದೇಶಗಳಾದ ಪ್ರೀತಿ, ಕ್ಷಮೆ, ದಯಾಗುಣಗಳು ಎಲ್ಲರ ಬದುಕಿನ ದಾರಿದೀಪವಾಗಲಿ. ಸುಖ, ಶಾಂತಿ, ಸಮೃದ್ಧಿ ನಾಡನ್ನು ತುಂಬಲಿ ಎಂದು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.
— Siddaramaiah (@siddaramaiah) December 25, 2023
ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. #MerryChristmas #Christmas pic.twitter.com/z1Z2Yc6JtX
‘ಮಾನವ ಜಗತ್ತಿಗೆ ಅಹಿಂಸೆಯ ಮಹತ್ವ ತಿಳಿಸಿ, ಶಾಂತಿ ಸಂದೇಶದ ಸಾರ ತಿಳಿಸಿದ ಯೇಸು ಕ್ರಿಸ್ತರನ್ನು ಈ ಪವಿತ್ರ ದಿನದಂದು ಸ್ಮರಿಸೋಣ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಸಂತೋಷ, ಉತ್ತಮ ಆರೋಗ್ಯ ನೆಮ್ಮದಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ಮಾನವ ಜಗತ್ತಿಗೆ ಅಹಿಂಸೆಯ ಮಹತ್ವ ತಿಳಿಸಿ ಶಾಂತಿ ಸಂದೇಶದ ಸಾರ ತಿಳಿಸಿದ ಯೇಸು ಕ್ರಿಸ್ತರನ್ನು ಈ ಪವಿತ್ರ ದಿನದಂದು ಸ್ಮರಿಸೋಣ”
— Vijayendra Yediyurappa (@BYVijayendra) December 25, 2023
ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಸಂತೋಷ, ಉತ್ತಮ ಆರೋಗ್ಯ ನೆಮ್ಮದಿಯನ್ನು ಹೊತ್ತುತರಲೆಂದು ಶುಭ ಹಾರೈಸುತ್ತೇನೆ.… pic.twitter.com/VPwewubrEB
‘ಯೇಸು ಕ್ರಿಸ್ತನು ಜಗತ್ತಿಗೆ ಶಾಂತಿ ಮತ್ತು ಸಂತೋಷವನ್ನು ತರಲಿ’. ನಿಮಗೆಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
I wish you all a very Happy Christmas. May lord almighty bring peace and happiness to the world. pic.twitter.com/a2TjcQrSt0
— H D Deve Gowda (@H_D_Devegowda) December 25, 2023
ಕ್ರಿಸ್‌ಮಸ್ ಹಬ್ಬವು ಭಕ್ತಿ, ಸೌಹಾರ್ದತೆಯ ಸಂಗಮವಾಗಿದ್ದು, ಯೇಸು ಕ್ರಿಸ್ತರ ಜನ್ಮದಿನವಾದ ಈ ದಿನ ಪ್ರತಿಯೊಬ್ಬರಿಗೂ ಶಾಂತಿ, ಸಹಬಾಳ್ವೆ ಹಾಗೂ ಸಹಿಷ್ಣುತೆಯಿಂದ ಜೀವಿಸಲು ಪ್ರೇರಣೆಯಾಗಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ
ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಭಕ್ತಿ, ಸೌಹಾರ್ದತೆಯ ಸಂಗಮವಾಗಿದ್ದು, ಯೇಸು ಕ್ರಿಸ್ತರ ಜನ್ಮದಿನವಾದ ಈ ದಿನ ಪ್ರತಿಯೊಬ್ಬರಿಗೂ ಶಾಂತಿ, ಸಹಬಾಳ್ವೆ ಹಾಗೂ ಸಹಿಷ್ಣುತೆಯಿಂದ ಜೀವಿಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.#Christmas pic.twitter.com/5ZDQ14eGDP
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 25, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.