ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ನಿಯಮಗಳಡಿ ಮಲ್ಯ ವಿರುದ್ಧ ಲುಕ್‌ ಔಟ್‌ ನೋಟಿಸ್ ಜಾರಿಯಾಗಿದೆ? ಮಾಹಿತಿ ಆಯೋಗ

Last Updated 17 ಜನವರಿ 2021, 13:02 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಎರಡು ಪ್ರತ್ಯೇಕ ಲುಕ್‌ಔಟ್ ನೋಟಿಸ್ ಅನ್ನು ಯಾವ ನಿಯಮಗಳ ಅನುಸಾರ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಸಿಬಿಐಗೆ ನಿರ್ದೇಶಿಸಿದೆ.

ಬ್ಯಾಂಕ್‌ಗಳಿಂದ ₹ 9000 ಕೋಟಿ ಸಾಲ ಪಡೆದು ಸುಸ್ತಿದಾರನಾಗಿರುವ ಮಲ್ಯ ವಿರುದ್ಧ 2015ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಲಾಗಿತ್ತು.

ಸಿಬಿಐ ನವೆಂಬರ್ ತಿಂಗಳು ನೀಡಿದ್ದ ಎರಡನೇ ನೋಟಿಸ್‌ನಲ್ಲಿ ಮಲ್ಯ ಚಲನವಲನಗಳ ಕುರಿತು ಮಾಹಿತಿ ನೀಡಬೇಕು ಎಂದು ಎಲ್ಲ ವಿಮಾನನಿಲ್ದಾಣಗಳ ಆಡಳಿತಗಳಿಗೆ ಸೂಚಿಸಿತ್ತು. ಇದಕ್ಕೂ ಹಿಂದೆ ಜಾರಿ ಮಾಡಿದ್ದ ನೋಟಿಸ್‌ನಲ್ಲಿ ಮಲ್ಯ ದೇಶದಿಂದ ಪಲಾಯನ ಮಾಡಲು ಸಂಚು ನಡೆಸಿದ ಸಂದರ್ಭದಲ್ಲಿ ಬಂಧಿಸಲು ಅವಕಾಶ ಕೋರಿ ನೋಟಿಸ್‌ ನೀಡಲಾಗಿತ್ತು.

ಪುಣೆ ಮೂಲದ ಆರ್‌ಟಿಇ ಕಾರ್ಯಕರ್ತ ವಿಹಾರ ದುರ್ವೆ ಅವರು ಸಲ್ಲಿಸಿದ್ದ ಅರ್ಜಿ ಆಧರಿಸಿ ಆಯೋಗವು ಈ ಸೂಚನೆಯನ್ನು ಸಿಬಿಐಗೆ ನೀಡಿದೆ. ಸಿಬಿಐ ಈ ಮೊದಲು ಅರ್ಜಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿತ್ತು.

ಮಾಹಿತಿ ನಿರಾಕರಣೆಗೆ ಆರ್‌ಟಿಐ ಕಾಯ್ದೆಯ 8(1) (ಎಚ್‌) ವಿಧಿಯನ್ನು ಉಲ್ಲೇಖಿಸಿತ್ತು. ತನಿಖೆಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹಹುದಾದ ಮಾಹಿತಿ ಬಹಿರಂಗ ಪಡಿಸದಿರಲು ಈ ವಿಧಿ ಅವಕಾಶ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT