ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾ ಸಟ್ಲೆಜ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳ ಸಂಪರ್ಕ ಕಡಿತ

Published : 25 ಆಗಸ್ಟ್ 2024, 15:07 IST
Last Updated : 25 ಆಗಸ್ಟ್ 2024, 15:07 IST
ಫಾಲೋ ಮಾಡಿ
Comments

ಬಿಜನೋರ್‌: ಧನ್‌ಬಾದ್‌ಗೆ ಹೋಗುತ್ತಿದ್ದ ಗಂಗಾ ಸಟ್ಲೆಜ್‌ ಎಕ್ಸ್‌ಪ್ರೆಸ್‌ ರೈಲಿನ ಕನಿಷ್ಠ 10 ಬೋಗಿಗಳ ಸಂಪರ್ಕ ಭಾನುವಾರ ಕಡಿತಗೊಂಡಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧನ್‌ಬಾದ್‌ಗೆ ಹೋಗುತ್ತಿದ್ದ ರೈಲಿನ ಕೆಲವು ಬೋಗಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಎಂಜಿನ್‌ನಿಂದ ಬೇರ್ಪಟ್ಟವು ಮತ್ತು ಇತರ ಕೆಲ ಬೋಗಿಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಂ ಸಿಂಗ್ ಮಾರ್ಚಲ್ ತಿಳಿಸಿದ್ದಾರೆ.

ಎರಡು ಸ್ಲೀಪರ್ ಕೋಚ್‌ಗಳ ನಡುವಿನ ಜೋಡಣೆ ಬೇರ್ಪಟ್ಟಾಗ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಫಿರೋಜ್‌ಪುರ-ಧನ್‌ಬಾದ್ ರೈಲಿನ ಜೋಡಣೆಯನ್ನು ಸರಿಪಡಿಸಿದ ನಂತರ ರೈಲು ಹೊರಟಿತು ಎಂದು ಅವರು ಹೇಳಿದರು.

ರೈಲಿನಲ್ಲಿ ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ 200 ಜನ ಅಭ್ಯರ್ಥಿಗಳಿದ್ದರೂ, ರೈಲ್ವೆ ಆಡಳಿತ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅವರಿಗೆ ಮೂರು ಬಸ್‌ಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಲು ವ್ಯವಸ್ಥೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT