ನವದೆಹಲಿ: ಭಾರತದ ಪ್ರಜಾಪ್ರಭುತ್ವಕ್ಕೆ 2024 ಉತ್ತಮ ವರ್ಷವಾಗಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 140 ಕೋಟಿ ಭಾರತೀಯರು ನಮ್ಮ ರಾಷ್ಟ್ರದ ನಿರ್ಮಾತೃಗಳು ಶ್ರಮದಿಂದ ನಿರ್ಮಿಸಿದ ನಮ್ಮ ದೀರ್ಘಕಾಲದ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗಳ ಅನ್ವಯ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವದ ರಚನೆಗಳನ್ನು ನಾಶಮಾಡಲು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉರುಳಿಸಲು ಮತ್ತು ನಮ್ಮ ಸಮಗ್ರತೆಗೆ ಧಕ್ಕೆ ತರಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
‘ಪ್ರಜಾಪ್ರಭುತ್ವದ ಸರ್ಕಾರವೇ ಅತ್ಯುತ್ತಮ ವಿಧದ ಸರ್ಕಾರವಾಗಿದೆ. ನಮ್ಮನ್ನು ಹೇಗೆ ಆಳಿದರು ಎಂಬುದನ್ನು ವ್ಯಕ್ತಪಡಿಸಲು ಮತ್ತು ನಾಯಕರನ್ನು ಜವಾಬ್ದಾರರನ್ನಾಗಿಸಲು ಜನರಿಗೆ ಇದರಲ್ಲಿ ಅವಕಾಶವಿದೆ’ಎಂಬ ದೇಶದ ಮೊದಲ ಪ್ರಧಾ ಮಂತ್ರಿ ಜವಾಹರಾಲ್ ನೆಹರೂ ಅವರ ಮಾತುಗಳನ್ನು ಖರ್ಗೆ ಉಲ್ಲೇಖಿಸಿದ್ದಾರೆ.
‘2024ರ ವರ್ಷ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯುತ್ತಮ ವರ್ಷವಾಗಿದೆ. 140 ಕೋಟಿ ಭಾರತೀಯರು ನಮ್ಮ ರಾಷ್ಟ್ರದ ನಿರ್ಮಾತೃಗಳು ಶ್ರಮದಿಂದ ನಿರ್ಮಿಸಿದ ನಮ್ಮ ದೀರ್ಘಕಾಲದ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗಳ ಅನ್ವಯ ತೀರ್ಪು ನೀಡಿದ್ದಾರೆ’ಎಂದು ಲೋಕಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಖರ್ಗೆ ಹೇಳಿದ್ದಾರೆ.
‘ಈಗ ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಾವು ಮತ್ತಷ್ಟು ಜಾಗರೂಕರಾಗಿರಬೇಕು ಹಾಗೂ ಭಾರತದ ಪ್ರಜೆಗಳೆಲ್ಲರೂ ನಂಬಿರುವ ನೀತಿಯನ್ನು ರಕ್ಷಿಸಬೇಕು’ಎಂದು ವಿಶ್ವ ಪ್ರಜಾಪ್ರಭುತ್ವದ ದಿನದಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರಜಾಪ್ರಭುತ್ವದ ದಿನವಾದ ಇಂದು ಮತ್ತೊಮ್ಮೆ ನಮ್ಮನ್ನು ನಾವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಒಳಗೊಂಡಿರುವ ಭಾರತದ ಮೂಲತತ್ವಕ್ಕೆ ಸಮರ್ಪಿಸಿಕೊಳ್ಳೋಣ’ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 15 ಅನ್ನು ವಿಶ್ವ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲು 2007ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯಿಸಿತ್ತು.
"Democracy is the best form of government. It allows people to have a say in how they are governed and to hold their leaders accountable."
— Mallikarjun Kharge (@kharge) September 15, 2024
~ Pandit Jawaharlal Nehru
The year 2024 is a watershed year for India's Democracy. 140 crore Indians gave a verdict which believed in our… pic.twitter.com/X1Uf1vEdcI
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.