ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರಕ್ಕೆ ಜಿ20 ದುರ್ಬಳಕೆ: ಕಾಂಗ್ರೆಸ್‌ ಟೀಕೆ

Published 19 ಆಗಸ್ಟ್ 2023, 13:21 IST
Last Updated 19 ಆಗಸ್ಟ್ 2023, 13:21 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿ 20 ಶೃಂಗಸಭೆಯ ಹೆಸರಿನಡಿ ಚುನಾವಣಾ ಅಭಿಯಾನವನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

‘1999ರಲ್ಲಿ ಜಿ 20 ರಚನೆಯಾಯಿತು. 19 ರಾಷ್ಟ್ರಗಳು ಹಾಗೂ ಯುರೋಪಿಯನ್‌ ಒಕ್ಕೂಟವು ಇದರ ಸದಸ್ಯತ್ವ ಪಡೆದಿವೆ. ಇಲ್ಲಿಯವರೆಗೆ 17 ರಾಷ್ಟ್ರಗಳು ಇದರ ಆತಿಥ್ಯವಹಿಸಿವೆ. ಈಗ ಭಾರತದ ಸರದಿಯಾಗಿದ್ದು, ಸೆಪ್ಟೆಂಬರ್‌ 9 ಮತ್ತು 10ರಂದು ನವದೆಹಲಿಯಲ್ಲಿ ಶೃಂಗಸಭೆ ನಿಗದಿಯಾಗಿದೆ. ಆದರೆ, ತನ್ನ ಚುನಾವಣಾ ತಂತ್ರದ ಭಾಗವಾಗಿ ಇದನ್ನು ಬಳಸಿಕೊಳ್ಳುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ (ಟ್ವಿಟರ್‌) ದೂರಿದ್ದಾರೆ.

‘ಕೇಂದ್ರದ ಈ ನಡೆ ಸರಿಯಲ್ಲ. ಇತರೆ ದೇಶಗಳಲ್ಲಿ ಇಂತಹ ವಾತಾವರಣ ಕಾಣಲು ಸಾಧ್ಯವಿಲ್ಲ. ದೇಶ ಎದುರಿಸುತ್ತಿರುವ ಗಂಭೀರ ವಿಷಯಗಳಿಂದ ಜನರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಈ ದುರ್ಬಳಕೆಯ ತಂತ್ರ ಅನುಸರಿಸುತ್ತಿದೆ’ ಎಂದು ಆಪಾದಿಸಿದ್ದಾರೆ.

80ರ ದಶಕದಲ್ಲಿ ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿ ವೇಳೆ ನವದೆಹಲಿಯಲ್ಲಿ ಕಾಮನ್‌ವೆಲ್ತ್‌ ರಾಷ್ಟ್ರಗಳ ಶೃಂಗಸಭೆಯನ್ನು ಸಂಘಟಿಸಲಾಗಿತ್ತು. ಇದಾದ ಬಳಿಕ ನೂರಕ್ಕೂ ಹೆಚ್ಚು ರಾಷ್ಟ್ರಗಳ ಅಲಿಪ್ತ ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು. ಆದರೆ, ಇಂತಹ ಸಭೆಗಳನ್ನು ಎಂದಿಗೂ ರಾಜಕೀಯ ಲಾಭಕ್ಕೆ ಬಳಸಿಕೊಂಡಿಲ್ಲ ಎಂದಿದ್ದಾರೆ.

‘ಉತ್ತಮವಾಗಿ ಕಾರ್ಯಕ್ರಮ ಸಂಘಟಿಸುವುದರಲ್ಲಿ ಮೋದಿ ನಿಪುಣರಾಗಿದ್ದಾರೆ ಎಂದು ಈ ಹಿಂದೆ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಹೇಳಿದ್ದು ನನಗೆ ಈಗಲೂ ನೆನಪಿದೆ. ಕಾರ್ಯಕ್ರಮಗಳ ಆಯೋಜನೆ ಮೂಲಕ ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವಲ್ಲಿ ಪ್ರಧಾನಿ ಕಾರ್ಯತತ್ಪರವಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT