ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

RSS, ಬಿಜೆಪಿ ಸಂಘಟನಾ ಚಾತುರ್ಯ ಹೊಗಳಿಕೆ: ದಿಗ್ವಿಜಯ್‌ ಕುಟುಕಿದ ‘ಕೈ’ ನಾಯಕರು

Published : 28 ಡಿಸೆಂಬರ್ 2025, 15:27 IST
Last Updated : 28 ಡಿಸೆಂಬರ್ 2025, 15:27 IST
ಫಾಲೋ ಮಾಡಿ
Comments
‘ಕೈ’ ನಾಯಕರ ಪ್ರತಿಕ್ರಿಯೆಗಳು
ನಮ್ಮ ಪಕ್ಷಕ್ಕೆ 140 ವರ್ಷ ಇತಿಹಾಸವಿದ್ದು ಇದರಿಂದ ನಾವು ಸಾಕಷ್ಟು ಕಲಿಯಬಹುದಾಗಿದೆ. ಸಂಘಟನೆ ಬಲಪಡಿಸುವ ಕುರಿತು ನಮಗೆ ಯಾರೂ ಹೇಳಿಕೊಡಬೇಕಿಲ್ಲ. ಯಾವುದೇ ಪಕ್ಷವಿರಲಿ ಶಿಸ್ತು ಬಹಳ ಮುಖ್ಯ
ಶಶಿ ತರೂರ್‌
ದ್ವೇಷದ ತಳಹದಿ ಮೇಲೆ ಹಾಗೂ ದ್ವೇಷವನ್ನೇ ಹಬ್ಬಿಸುವ ತತ್ವದ ಮೇಲೆ ಕಟ್ಟಿದ ಸಂಘಟನೆಯೇ ಆರ್‌ಎಸ್‌ಎಸ್‌. ಅಲ್‌ಕೈದಾ ಕೂಡ ದ್ವೇಷ ಹಬ್ಬಿಸುವ ಸಂಘಟನೆ. ನೀವು ಅಲ್‌ಕೈದಾದಿಂದ ಏನಾದರೂ ಕಲಿಯಬಹುದೇ? ಈ ಸಂಘಟನೆಯಿಂದ ಕಲಿಯಲಿಕ್ಕಾದರೂ ಏನಿದೆ?
ಮಾಣಿಕಂ ಟ್ಯಾಗೋರ್‌ 
ನಾವು ಆರ್‌ಎಸ್‌ಎಸ್‌ ಪ್ರತಿಪಾದಿಸುವ ಸಿದ್ಧಾಂತವನ್ನು ವಿರೋಧಿಸುತ್ತೇವೆ. ಹೀಗಾಗಿ ನಾವು ಅವರಿಂದ ಕಲಿಯುವಂಥದ್ದು ಖಂಡಿತವಾಗಿಯೂ ಏನೂ ಇಲ್ಲ
ಸಲ್ಮಾನ್‌ ಖುರ್ಷೀದ್ 
‘ಇದು ರಾಹುಲ್‌ ಹಟಾವೋ ಆಂದೋಲನ..’
ಕಾಂಗ್ರೆಸ್‌ ಪಕ್ಷವೀಗ ರಾಹುಲ್‌ ಬಣ ಹಾಗೂ ಪ್ರಿಯಾಂಕಾ ಬಣ ಎಂದು ಇಬ್ಭಾಗವಾಗಿದೆ. ರಾಹುಲ್‌ ಗಾಂಧಿ ಬಣದ ವಿರುದ್ಧ ನಡೆಯುತ್ತಿರುವ ನಿರಂತರ ವಾಗ್ದಾಳಿಯು ಪಕ್ಷದ ಕಾರ್ಯಕರ್ತರು ಅವರಲ್ಲಿ ವಿಶ್ವಾಸ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ರಾಹುಲ್‌ ಗಾಂಧಿ ಅವರ ಮನವೊಲಿಸುವುದು ಕಷ್ಟ ಎಂದು ಸ್ವತಃ ಅವರ ಮಾರ್ಗದರ್ಶಕ ದಿಗ್ವಿಜಯ್‌ ಸಿಂಗ್ ಹೇಳುತ್ತಿದ್ದಾರೆ. ಟಿ.ಎಸ್‌.ಸಿಂಗ್‌ ದೇವ್‌ ರಶೀದ್‌ ಅಲ್ವಿಯಂತಹ ನಾಯಕರು ಸಿಂಗ್‌ ಅವರ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದು ರಾಹುಲ್ ಹಟಾವೊ ಆಂದೋಲನದಂತೆ ಗೋಚರಿಸುತ್ತಿದೆ– ಶೆಹಜಾದ್ ಪೂನಾವಾಲಾ ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT