ನವದೆಹಲಿ: ಕಾಂಗ್ರೆಸ್ ಪಕ್ಷವು ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವನ್ನು ಪುನರ್‌ರಚನೆ ಮಾಡಿದ್ದು, ಅಧ್ಯಕ್ಷರಾಗಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ನೇಮಿಸಿದೆ.
ಈ ವಿಭಾಗವು ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ಕೆಟಿಎಸ್ ತುಳಸಿ ಮತ್ತು ವಿವೇಕ್ ತಂಖಾ ಅವರನ್ನು ಒಳಗೊಂಡಿದೆ. ಹರಿನ್ ರಾವಲ್, ಪ್ರಶಾಂತೊ ಸೇನ್, ದೇವದತ್ತ ಕಾಮತ್ ಮತ್ತು ವಿಪುಲ್ ಮಹೇಶ್ವರಿ ಅವರೂ ಸದಸ್ಯರಾಗಿದ್ದಾರೆ. ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ಖಾನ್ ಅವರನ್ನು ನೇಮಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿ, ತಕ್ಷಣದಿಂದಲೇ ಅನುಷ್ಠಾನ ಮಾಡುವಂತೆ ಸೂಚಿಸಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.