ಮುಂಬೈ (ಪಿಟಿಐ): ಸಾಂಗ್ಲಿ ಜಿಲ್ಲೆಯ ಕುಪ್ವಾಡ ಫಟಾ ಎಂಬಲ್ಲಿನ ಬಾರ್ವೊಂದರಲ್ಲಿ ನಡೆದ ಗಲಾಟೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಪೊಲೀಸ್ ಕಾನ್ಸ್ಟೆಬಲ್ವೊಬ್ಬರನ್ನು ಹತ್ಯೆ ಮಾಡಿದ್ದಾರೆ.

ಸಮಾಧಾನ್ ಮಂಟೆ ಹತ್ಯೆಯಾದ ಕಾನ್ಸ್ಟೆಬಲ್. ಮೀರಜ್ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಮಾಧಾನ್, ಕುಪ್ವಾಡದ ಬಾರ್ಗೆ ಹೋದಾಗ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂವರು ಅಪರಿಚಿತರೊಂದಿಗೆ ಜಗಳ ಮಾಡಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಹೊರಗಡೆ ಹೋಗಿ ತನ್ನ ವಾಹನದಲ್ಲಿದ್ದ ಹರಿತವಾದ ಆಯುಧ ತಂದಿದ್ದಾನೆ. ಇತರ ಇಬ್ಬರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ಸಮಾಧಾನ್ ಮೇಲೆ ಆ ವ್ಯಕ್ತಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಎದೆ, ತಲೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಿಂದ ಕುಸಿದು ಬಿದ್ದ ಸಮಾಧಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.