ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವಕಾಶವಾದಿ ಮೈತ್ರಿಗಳನ್ನು ಜನರು ನಂಬುವುದಿಲ್ಲ’

Last Updated 7 ಸೆಪ್ಟೆಂಬರ್ 2022, 13:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಅವಕಾಶವಾದಿ ಮೈತ್ರಿಗಳ ಸಾಧ್ಯತೆಗಳನ್ನು ದಾಟಿ ದೇಶವು ಬಹಳ ಮುಂದೆ ಬಂದಿದೆ. ದೇಶವು ಶಕ್ತಿಯುತ ಮತ್ತು ನಿರ್ಧಾರಯುತ ನಾಯಕತ್ವವನ್ನು ಬಯಸುತ್ತಿದೆ’ ಎಂದು ಬುಧವಾರ ಬಿಜೆಪಿ ಹೇಳಿದೆ.

ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಯತ್ನದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ‘ಬಿಹಾರವು ಒಂದೆಡೆ ಬರ ಇನ್ನೊಂದೆಡೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಹತ್ಯೆಗಳ ಸಂಖ್ಯೆ ಏರುತ್ತಿದೆ. ಈ ಹೊತ್ತಿನಲ್ಲಿ ನಿತೀಶ್‌ ಅವರು ‘ರಾಜಕೀಯ ತೀರ್ಥಯಾತ್ರೆ’ ಕೈಗೊಂಡಿದ್ದಾರೆ’ ಎಂದು ದೂರಿದರು.

‘ನಿತೀಶ್‌ ಅವರ ಪಕ್ಷದವರು, ಆರ್‌ಜೆಡಿ ಸದಸ್ಯರು ನಿತೀಶ್ ಅವರನ್ನು ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಈ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ, ಕೆ. ಚಂದ್ರಶೇಖರ್‌ ರಾವ್‌, ಅರವಿಂದ ಕೇಜ್ರಿವಾಲ್‌ ಅವರು ಒಪ್ಪಿಗೆ ನೀಡಿದ್ದಾರೆಯೇ’ ಎಂದು ಲೇವಡಿ ಮಾಡಿದರು.

‘ಪ್ರಧಾನಿ ಮೋದಿ ಅವರ ಸ್ಥಿರ ಮತ್ತು ನಿರ್ಧಾರಯುತ ನಾಯತ್ವವನ್ನು ದೇಶವು ಇಷ್ಟಪಟ್ಟಿದೆ. ಮೋದಿ ಅವರ ನಾಯಕತ್ವವು ದೇಶವನ್ನು ಅಭಿವೃದ್ಧಿಪಡಿಸುವ ಜೊತೆಗೆ ಜನರಲ್ಲಿ ಭರವಸೆ ಮತ್ತು ಉತ್ಸಾಹವನ್ನು ಮೂಡಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT