ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಕ್ಲಿಷ್ಟಕರ ಸವಾಲು ಎದುರಾಗಲಿದೆ
Published 26 ಏಪ್ರಿಲ್ 2024, 19:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತಲೆನೋವಿನಂಥ ಕಾಯಿಲೆಗಳು ಬರಬಹುದಾದ ಸಾಧ್ಯತೆ ಇದ್ದು, ಕಂಪ್ಯೂಟರ್, ಟಿವಿ ಮತ್ತು ಮೊಬೈಲ್ ನೋಡುವುದನ್ನು ಆದಷ್ಟು ಕಡಿಮೆ ಮಾಡಿ. ವೃತ್ತಿ ಜೀವನದಲ್ಲಿ ಕ್ಲಿಷ್ಟಕರವಾದ ಸವಾಲು ಎದುರಾಗಲಿದೆ.
ವೃಷಭ
ಮಗಳ ಮದುವೆಯ ವಿಚಾರವಾಗಿ ವಿವಿಧ ರೀತಿಯ ಪರಿಸ್ಥಿತಿ ಎದುರಿಸುವಿರಿ. ಕಂಪ್ಯೂಟರ್ ಎಂಜಿನಿಯರ್‌ಗಳು ಕಂಪನಿ ಬದಲಿಸುವ ಅಭಿಪ್ರಾಯ ಹೊಂದಲಿದ್ದೀರಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ.
ಮಿಥುನ
ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನೆಡೆದಲ್ಲಿ ಮುಂದಿನ ಸಿಹಿ ದಿನಗಳನ್ನು ಆನಂದದಿಂದ ಅನುಭವಿಸಬಹುದು. ವೈದ್ಯಕೀಯ ಲೋಕದಲ್ಲಿ ಅದರಲ್ಲೂ ಆಯುರ್ವೇದ ತಿಳಿದವರಿಗೆ ಬೇಡಿಕೆ ಹೆಚ್ಚಾದೀತು.
ಕರ್ಕಾಟಕ
ಇಷ್ಟು ದಿನ ನೀವು ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಅಥವಾ ವಸ್ತು ನಿಮ್ಮ ಎಚ್ಚರ ತಪ್ಪಿದಲ್ಲಿ ನಿಮ್ಮಿಂದ ದೂರಾಗುವ ಸಾಧ್ಯತೆ ಇದೆ. ಶ್ರಮ ವಹಿಸಿದ್ದಲ್ಲಿ ಯಶಸ್ಸಿನ ಹಾದಿಯು ಅತ್ಯಂತ ಸುಗಮವಾಗಲಿದೆ.
ಸಿಂಹ
ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಗಣಪತಿ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ. ಸ್ನೇಹಿತರ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿಕೆಯು ಮನಸ್ಸಿಗೆ ಖುಷಿ ತರಲಿದೆ. ಆದರೆ ನಾಳೆ ಬಗ್ಗೆ ಗಮನವಿರಲಿ.
ಕನ್ಯಾ
ಸಂಬಂಧಿಗಳ ಮನೆಯಲ್ಲಿ ಪರಿಚಯವಾದ ಕುಟುಂಬವು ನಿಮ್ಮ ಹತ್ತಿರದ ಸಂಬಂಧವಾಗಿ ಬದಲಾಗುವ ಎಲ್ಲ ಲಕ್ಷಣಗಳೂ ಇವೆ. ಗುರಿ ಸಾಧಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಅತ್ಯಂತ ಶೀಘ್ರವಾಗಿ ಪೂರ್ಣ ಗೊಳಿಸುವಿರಿ.
ತುಲಾ
ದೇಹಕ್ಕೆ ಅಗತ್ಯವಿರುವಷ್ಟು ಆಹಾರ ಹಾಗೂ ವಿಶ್ರಾಂತಿ ತೆಗೆದುಕೊಳ್ಳಬೇಕು. ಇದರಿಂದ ಆರೋಗ್ಯವಾಗಿರುವುದರಿಂದ ವೈದ್ಯರಿಂದ ದೂರವಿರಬಹುದು. ನಿಮ್ಮಿಷ್ಟದ ಬದುಕು ಪ್ರಯತ್ನದಿಂದ ನಿಮ್ಮದಾಗಲಿದೆ.
ವೃಶ್ಚಿಕ
ದಿನಗೂಲಿ ಕೆಲಸದಲ್ಲಿರುವವರು ಈ ದಿನದ ಕೆಲಸದಲ್ಲಿ ಹೊಸತನ ಕಂಡುಕೊಳ್ಳಲಿದ್ದೀರಿ. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಈ ದಿನ ಪ್ರಗತಿಯ ಹಾದಿ ಸ್ಪರ್ಶಿಸಲಿದ್ದೀರಿ.
ಧನು
ನಿಮ್ಮ ಮನಸ್ಸು ಇಂದು ಉತ್ತಮ ಗಾಳಿ, ಪ್ರಶಾಂತ ವಾತಾವರಣ ಮತ್ತು ಏಕಾಂತದ ನಿರೀಕ್ಷೆಯಲ್ಲಿರಲಿದೆ. ಹರಿತವಾದ ವಸ್ತುಗಳನ್ನು ಬಳಸುವಾಗ ವಿಶೇಷ ಗಮನ ಇರಲಿ. ನಿಮ್ಮ ಗೌರವ ಉಳಿಸಿಕೊಳ್ಳುವಂತವರಾಗಬೇಕು.
ಮಕರ
ಪರಂಪರೆಯಲ್ಲಿ ನಮಗೆ ಬಂದಿರುವ ಆಸ್ತಿ ಮತ್ತು ವಸ್ತುಗಳ ಮಾರಾಟದ ಯೋಚನೆಗಳಿದ್ದಲ್ಲಿ ಅದನ್ನು ಕೈ ಬಿಡುವುದು ಸೂಕ್ತ. ಈಗಷ್ಟೇ ಆರಂಭವಾಗಿದ್ದ ಹೊಸ ಕೆಲಸವು ನಿಲ್ಲುವ ಸೂಚನೆಗಳು ನಿಮಗೆ ಕಾಣಬಹುದು.
ಕುಂಭ
ವೃದ್ಧರು ಹಾಗೂ ಅಶಕ್ತರನ್ನು ಗೌರವದಿಂದ ಕಾಣುವ ನಿಮ್ಮ ಸ್ವಭಾವವು ನಿಮ್ಮಿಂದ ಆಕರ್ಷಿತರಾದವರಲ್ಲಿ ಬಹಳ ಗೌರವ ಮೂಡಿಸಲಿದೆ. ಮಾಡುವ ಕೆಲಸವು ಉತ್ತಮವಾಗಿ ಹಾಗೂ ಸರಾಗವಾಗಿ ಮುಗಿಯುತ್ತದೆ.
ಮೀನ
ಮಿತಿ ಮೀರಿದ ನಿಮ್ಮ ಪುತ್ರ ವ್ಯಾಮೋಹವು ಆತನ ಭವಿಷ್ಯಕ್ಕೆ ಕಂಟಕ ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಹಿಂದೆ ಕೊಟ್ಟ ಮಾತು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ. ಬೇರೆಯವರನ್ನು ಕಾರಣವಿಲ್ಲದೆ ದೂಷಿಸಬೇಡಿ.