ಸ್ವಾರ್ಥರೂಪ ಸಮಾನರಾದ ಎಲ್ಲಾ ನಾಯಕರಿಗೆ ಅಡ್ಡಬಿದ್ದೆ. ಅದಾಗಿ ಉಭಯ ಕುಶಲೋಪರಿ ಸಾಂಪ್ರತ. ತಾವು ಮೂರೊರ್ಸದ ಹಿಂದೆ ಪಟ್ಟಕ್ಕೆ ಕೂಕಳುವಾಗ ನಮ್ಮ ಕಷ್ಟ ಬಗೆಹರಿದೋ ಅಂತ ಖುಸಿಯಾಗಿದ್ದೋ. ಆದರೆ, ಕೆಲಸಗಳು ಒಂದೂ ಆಯ್ತಿಲ್ಲವಲ್ಲ ಬುದ್ಯೋ. ಸರ್ಕಾರ ಎಲ್ಲದೆ ಅಂತ್ಲೇ ಗೊತ್ತಾತಿಲ್ಲ. ಅಧಿಕಾರಿಗಳು ಹೆಚ್ಚಿಕ್ಯಬುಟ್ಟವ್ರೆ, ಹಿಂಗಾದ್ರೆ ನಾವೂ ಆಪೀಸುಗಳಿಗೆ ಹೋಗುವಾಗ ಚಪ್ಪಲಿ ಕೈಲಿ ಹಿಡಕ ಹೋಗಬೇಕಾತದೆ.

ನಿಮ್ಮ ಸಾಸಕರು ಬರಗೆಟ್ಟೋರಂಗೆ ನಿಗಮ, ಮಂಡಲಿ ಕಾಸು ಗೋರಿಗೋರಿ ಸಂದೂಕ ತುಂಬಿಕ್ಯತ್ತಾವ್ರೆ. ಅದೇಟು ಹಸಿದಿದ್ರೋ ಕಾಣೆ. ಮನೆಗೆ ಮಾತ್ರಾ ಫ್ರೀ ಕರಂಟು ಕೊಟ್ಟು ರೈತರ ಪಂಪ್ಸೆಟ್ಟಿಗೆ ಕರಂಟು ಬಿಲ್ಲು ಗ್ಯಾರಂಟಿ ಕಟ್ಟಿಸಿಗ್ಯತ್ತೀರಿ. ಅನ್ನಭಾಗ್ಯದಿಂದ ಅಪಾಪೋಲಿಗಳು ಕಾಸು ಮಾಡಿಕ್ಯತ್ತಾವ್ರೆ. ನಮ್ಮ ಯೇಗ್ತೇಗೆ ಕೈಗೊಂದು ಕ್ವಾಟ್ರು, ಬಾಯಿಗೊಂದು ಬೋಟಿ ಭಾಗ್ಯದ ಗ್ಯಾರಂಟಿ ಕೊಡಬೌದಾಗಿತ್ತಲ್ಲವಾ?

ನೀವು ಫ್ರೀ ಬಸ್ಸು ಬುಟ್ಟು ಹೆಂಗಸರ ಕೈಗೆ ಏಡೇಡು ಸಾವಿರ ಕಾಸು ಕೊಟ್ರಲ್ಲಾ ಅದ ತಗಂದು ಎಲ್ಲಾರೂ ದೇವರ ದರ್ಶನಕ್ಕೋಯ್ತರೆ. ಮೊನ್ನೆ ನನ್ನೆಂಡ್ರುಗೆ ‘ನಿನಗೆ ಬಂದ ಪುಣ್ಯದೇಲಿ ನನಗೆಷ್ಟು ಪಾಲದೆ?’ ಅಂತ ಕೇಳಿದೆ. ಅದುಕ್ಕೆ ಅವಳು ‘ಹೆಂಡ್ರು ಗಳಿಸಿದ ಪುಣ್ಯದಲ್ಲಿ ಗಂಡಗೆ ಪಾಲಿಲ್ಲ. ಗಂಡ ಅವನ ಪುಣ್ಯದೇಲಿ ಹೆಂಡ್ರಿಗೆ ಅರ್ಧ ಪಾಲು ಕೊಡಬಕು ತಿಳುಕೋ’ ಅಂದ್ಬುಟ್ಲು ಕನಣೈ.

ಪಕ್ಸದ ಆವುಟ ಕಟ್ತಿದ್ದೋರು, ಕಸ ಹೊಡೆದೋರು, ಪಾತ್ರೆ ತೊಳೆದೋರು, ಪಂಚೆ ವದರಿಕ್ಯಂದು ಬಂದೋರು ಫೈನಲ್ ಮ್ಯಾಚಲ್ಲಿ ಟಾಸ್ ಯಾರಿಗೆ ಬೀಳ್ತದೆ ಅಂತ ಕಾಯಬಕು. ನಿಮ್ಮ ಲೈ-ಕಮಾಂಡುಗಳು ‘ಯಾರ ಮ್ಯಾಲೆ ಯಾರು ಬಿದ್ದರೆ ನನಗೇನು. ನಮ್ಮಲ್ಲಿ ಸಮಸ್ಯೇನೇ ಇಲ್ಲ’ ಅಂತ ಭಾಳ ಲೈಟಾಗಿಬುಟ್ಟವೆ. ನಮಗೂ ರೋಸೋಗ್ಯದೆ. ನೀವು ಏನಾದರೂ ಆಗಿ ಆದರೆ ಸೀಟು ಜಗಳ ನಿಲ್ಲಿಸಿ ಒಳ್ಳೆ ರಾಜಕಾರಣಿಗಳಾಗಿ. ತಿಳಿದವರಿಗೆ ಹೆಚ್ಚಿಗೆ ಹೇಳಲು ಶಕ್ತನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.