ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ
Published 29 ಡಿಸೆಂಬರ್ 2025, 23:28 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಲೆಯ ಪ್ರದರ್ಶನದಿಂದ ಪ್ರಶಂಸೆ ಮತ್ತು ಗೌರವಾದರಗಳಿಂದ ಮನೋಲ್ಲಾಸ ಉಂಟಾಗುವುದು. ಸಂಘ ಸಂಸ್ಥೆಗಳ ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
ವೃಷಭ
ಪ್ರೀತಿ ಪಾತ್ರರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಇರುವಂ ತಾಗಲಿದೆ. ದೇವರ ಸೇವೆಯಿಂದ ಕೌಟುಂಬಿಕ ಸಮಸ್ಯೆಗಳು ದೂರವಾಗಲಿವೆ. ಉದ್ಯಮಿಗಳಿಗೆ ಸರ್ಕಾರದಿಂದ ಅನುಕೂಲ ಉಂಟಾಗಲಿದೆ.
ಮಿಥುನ
ನಿವೃತ್ತಿ ಜೀವನದ ನಂತರದ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ನವದಂಪತಿಗೆ ಸಂತಾನದ ಶುಭ ಸುದ್ದಿ ಕೇಳಿ ಬರುವುದು. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ.
ಕರ್ಕಾಟಕ
ಮುಂಚೆಯೇ ನಿರ್ಧರಿಸಿದ್ದ ಪ್ರಯಾಣವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುವ ಅಥವಾ ಕೈಬಿಡುವ ಯೋಚನೆ ಮಾಡುವಿರಿ. ವದಂತಿಗಳಿಗೆ ಕಿವಿಗೊಡದೆ ಕೆಲಸ ಮುಂದುವರಿಸಿ.
ಸಿಂಹ
ಸೃಷ್ಟಿಯಾದ ಕೌಟುಂಬಿಕ ಕಲಹವನ್ನು ಬುದ್ಧಿವಂತಿಕೆ ಉಪಯೋಗಿಸಿ ತಿಳಿಗೊಳಿಸಿ. ರಾಜಕೀಯ ವಿಭಾಗದಲ್ಲಿ ಶ್ರಮಸಹಿತ ಜಯಸಾಧನೆ ಮನಸ್ಸಿಗೆ ತೃಪ್ತಿತರುವುದು.
ಕನ್ಯಾ
ಜವಾಬ್ದಾರಿಯುಕ್ತ ನಡೆ, ದಿಟ್ಟತನದ ಜತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟ ಆಗುವುದಿಲ್ಲ. ಮಾರುಕಟ್ಟೆಯ ಬದಲಾವಣೆ ಅನುಕೂಲಕ್ಕೆ ತಕ್ಕಂತೆ ಇರುವುದು.
ತುಲಾ
ಕೃತಕ ಅಂಗಾಂಗಗಳ ಕಸಿ ಮಾಡಿಸಿಕೊಂಡಿರುವವರಿಗೆ ಅದರಿಂದಾಗಿ ಆರೋಗ್ಯ ತಪ್ಪುವ ಸಾಧ್ಯತೆ ಇದೆ. ಕೌಟುಂಬಿಕ ವಿವಾದಗಳು ರಾಜೀ ಮನೋಭಾವಗಳಿಂದ ಸಮಾಪ್ತಿ‌‌‌. ಹಣದ ದುಂದುವೆಚ್ಚವನ್ನು ನಿಲ್ಲಿಸಿ.
ವೃಶ್ಚಿಕ
ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ದೂರದ ಪ್ರಯಾಣಗಳು ಅನುಕೂಲಕರವಾಗಿರುವುದು. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ.
ಧನು
ಅಸಾಧ್ಯ ಕಾರ್ಯಗಳನ್ನೂ ಸಾಧಿಸಿ ತೋರಿಸುವಷ್ಟು ಮನೋಬಲ, ಛಲ ವೃದ್ಧಿಸಿಕೊಳ್ಳಿ. ಬಂಧುಗಳಲ್ಲಿನ ಮಾತಿನ ಚಕಮಕಿ ಮನಸ್ಸಿಗೆ ಗೊಂದಲ ತಂದೀತು. ಪೂರ್ವ ನಿಯಾಮಕವಾಗಿ ಕೆಲಸ ಮಾಡುವುದು ಮುಖ್ಯ.
ಮಕರ
ದೂರದ ಪ್ರಯಾಣದಲ್ಲಿ ಇದ್ದರೂ ಮಗಳ ಜವಾಬ್ದಾರಿಯುತ ನಡೆಯಿಂದಾಗಿ ಮನೆ ಮತ್ತು ಕುಟುಂಬದ ಚಿಂತೆ ಅಷ್ಟಾಗಿ ಕಾಡುವುದಿಲ್ಲ. ಧಾನ್ಯಗಳ ರಫ್ತು ಮಾರಾಟಗಾರರು ಅನುಕೂಲವನ್ನು ಪಡೆಯುವಿರಿ.
ಕುಂಭ
ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ. ವಿಶೇಷ ತೀರ್ಮಾನಗಳನ್ನು ಮಡದಿಯಲ್ಲಿ ಕೇಳಿ ತೀರ್ಮಾನಿಸಿ. ಕೆಲಸ ಸಾಧಿಸಲು ಹೊಸ ಮಾರ್ಗ ಆರಿಸಿಕೊಳ್ಳಬೇಕಾಗುವುದು.
ಮೀನ
ಜೆರಾಕ್ಸ್‌ ಅಥವಾ ಪ್ರಿಂಟಿಂಗ್ ಪ್ರೆಸ್‌ನವರಿಗೆ ಅತ್ಯಧಿಕ ಮಟ್ಟದ ಗ್ರಾಹಕರು ಬರುತ್ತಾರೆ. ಯಶಸ್ಸು ಹಿರಿಯರ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತದೆ. ವಿಶೇಷ ಪೂಜೆ ನಡೆಸಲು ತಯಾರಿ ಮಾಡುವಿರಿ.
ADVERTISEMENT
ADVERTISEMENT