ಅಹಮದಾಬಾದ್: ಜಸ್ಪ್ರೀತ್ ಬೂಮ್ರಾ ಅವರ ದಾಳಿಗೆ ಆರಂಭಿಕ ಆಘಾತ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಡಿವಾಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ ಆಸರೆಯಾದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥೇಯ ತಂಡದ ವೇಗಿ ಬೂಮ್ರಾ (15ಕ್ಕೆ3) ಆರಂಭದಲ್ಲಿ ಪೆಟ್ಟು ಕೊಟ್ಟರು. ಇದರಿಂದಾಗಿ 20 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಇದರಿಂದಾಗಿ ಪವರ್ಪ್ಲೇ ಅವಧಿಯಲ್ಲಿ ಕೇವಲ 41 ರನ್ಗಳು ಮಾತ್ರ ದಕ್ಷಿಣ ಆಫ್ರಿಕಾ ಖಾತೆ ಸೇರಿದವು. ಈ ಹಂತದಲ್ಲಿ ಜೊತೆಯಾದ ಡಿವಾಲ್ಡ್ ಮತ್ತು ಮಿಲ್ಲರ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 187 ರನ್ ಗಳಿಸಿತು.

ಒಂದನೇ ಗುಂಪಿನಲ್ಲಿ ಭಾರತಕ್ಕೆ ಅತ್ಯಂತ ಕಠಿಣ ಎದುರಾಳಿ ಎಂದೇ ದಕ್ಷಿಣ ಆಫ್ರಿಕಾ ಬಿಂಬಿತವಾಗಿದೆ. ಇನಿಂಗ್ಸ್ನಲ್ಲಿ ಬೂಮ್ರಾ ಹಾಕಿದ ಎರಡನೇ ಓವರ್ನ ನಾಲ್ಕನೇ ಎಸೆತವನ್ನು ಕ್ವಿಂಟನ್ ಡಿಕಾಕ್ ಬೌಂಡರಿಗೆರೆ ದಾಟಿಸಿದರು. ನಂತರದ ಎಸೆತದಲ್ಲಿ ಬೂಮ್ರಾ ಅವರು ಕ್ವಿಂಟನ್ ವಿಕೆಟ್ ಉರುಳಿಸಿದರು.

ನಂತರದ ಓವರ್ನಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ತಮ್ಮ ಕೈಚಳಕ ಮೆರೆದರು. ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕರಂ (4; 7ಎ) ಮಿಡ್ಆಫ್ನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಸುಲಭ ಕ್ಯಾಚ್ ಕೊಟ್ಟರು. ಅದೇ ಓವರ್ನ ಕೊನೆಯ ಎಸೆತದಲ್ಲಿ ರಿಯಾನ್ ರಿಕೆಲ್ಟನ್ ಅವರು ಸಿಕ್ಸರ್ ಹೊಡೆದು ತಮ್ಮ ತೋಳ್ಬಲ ಮೆರೆದರು. ಅದರ ನಂತರದ ಓವರ್ನಲ್ಲಿ ಬೂಮ್ರಾ ಎಸೆತವನ್ನೂ ಸಿಕ್ಸರ್ಗೆತ್ತುವ ಪ್ರಯತ್ನದಲ್ಲಿ ರಿಯಾನ್ ಅವರು ಶಿವಂ ದುಬೆಗೆ ಕ್ಯಾಚ್ ಕೊಟ್ಟು ನಡೆದರು.

ಆಗ ಜೊತೆಗೂಡಿದ ಬ್ರೆವಿಸ್ (45; 29ಎ) ಮತ್ತು ಮಿಲ್ಲರ್ (63; 35ಎ) ಇನಿಂಗ್ಸ್ಗೆ ಬಲ ತುಂಬಿದರು. ಬ್ರೆವಿಸ್ 3 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ಗಳನ್ನು ಹೊಡೆದರು. 13ನೇ ಓವರ್ನವರೆಗೂ ಪ್ರತಾಪ ಮೆರೆದರು. ಅರ್ಧಶತಕದತ್ತ ಸಾಗಿದ್ದ ಬ್ರೆವಿಸ್ ಅವರಿಗೆ ಮಧ್ಯಮವೇಗಿ ಶಿವಂ ದುಬೆ ಪೆವಿಲಿಯನ್ ಹಾದಿ ತೋರಿಸಿದರು. ಜೊತೆಯಾಟ ಮುರಿಯಿತು. ಆದರೆ ಮಿಲ್ಲರ್ ತಮ್ಮ ಬೀಸಾಟ ಮುಂದುವರಿಸಿದರು. ಅವರಿಗೆ ಟ್ರಿಸ್ಟನ್ ಸ್ಟಬ್ಸ್ ಕೂಡ ಜೊತೆಯಾಟದರು. ಸ್ಟಬ್ಸ್ ಅಜೇಯ 44 ರನ್ಗಳನ್ನು 24 ಎಸೆತಗಳಲ್ಲಿ ಹೊಡೆದರು. ಅದರಲ್ಲಿ 1 ಬೌಂಡರಿ, 3 ಸಿಕ್ಸರ್ ಇದ್ದವು.
ಕೊನೆಯ ಐದು ಓವರ್ಗಳ ಅಂತರದಲ್ಲಿ ಮತ್ತೆ ಮೂರು ವಿಕೆಟ್ಗಳು ಪತನವಾಗಲು ಬೂಮ್ರಾ ಹಾಗೂ ಆರ್ಷದೀಪ್ ಸಿಂಗ್ (28ಕ್ಕೆ2) ಕಾರಣರಾದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು ದ್ವಿಶತಕದ ಗಡಿ ದಾಟಲು ಸಾಧ್ಯವಾಗಲಿಲ್ಲ.

ಪಂದ್ಯ ವೀಕ್ಷಿಸಿದ ಸುಂದರ್ ಪಿಚೈ:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್–8 ಪಂದ್ಯವನ್ನು ಗೂಗಲ್ ಸಿಇಒ ಸುಂದರ್ ಪಿಚೈ ವೀಕ್ಷಿಸಿದರು. ಮೈದಾನದಲ್ಲಿ ಐಸಿಸಿ ಮುಖ್ಯಸ್ಥ ಜಯ್ ಶಾ ಅವರೊಂದಿಗೆ ಪಂದ್ಯವನ್ನು ನೋಡಿದರು. ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಪೋನ್, ಈ ಟೂರ್ನಿಗೆ ಅಧಿಕೃತ ಪಾಲುದಾರರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.