ಕ್ಯಾಂಡಿ: ಶ್ರೀಲಂಕಾ ತಂಡವನ್ನು ಕೇವಲ 95 ರನ್ಗಳಿಗೆ ಉರುಳಿಸಿದ ಇಂಗ್ಲೆಂಡ್ ತಂಡದವರು, ನಾಯಕ ಹ್ಯಾರಿ ಬ್ರೂಕ್ ಅವರಿಗೆ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೋರೆ ನೀಡಿದರು. ಭಾನುವಾರ ನಡೆದ ಟಿ20 ವಿಶ್ವಕಪ್ನ ಸೂಪರ್ ಎಂಟು ಹಂತದ ಪಂದ್ಯದಲ್ಲಿ ಇಂಗ್ಲೆಂಡ್ 51 ರನ್ಗಳಿಂದ ಆತಿಥೇಯ ತಂಡದ ಮೇಲೆ ಜಯಗಳಿಸಿತು.

ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಇಂಗ್ಲೆಂಡ್ ತಂಡವನ್ನು ಶ್ರೀಲಂಕಾ ತಂಡದ ಬೌಲರ್ಗಳು 9 ವಿಕೆಟ್ಗೆ 146 ರನ್ಗಳ ಅಲ್ಪಮೊತ್ತಕ್ಕೆ ನಿಯಂತ್ರಿಸಿದರು. ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಳಗೆ 26 ರನ್ನಿಗೆ 3 ವಿಕೆಟ್ ಪಡೆದರು. ಆದರೆ ವೇಗದ ಬೌಲರ್ ಜೋಫ್ರಾ ಆರ್ಚರ್ (20ಕ್ಕೆ2) ಮತ್ತು ಸ್ಪಿನ್ನರ್ ವಿಲ್ ಜಾಕ್ಸ್ (22ಕ್ಕೆ3) ಅವರು ತಿರುಗೇಟು ನೀಡಿ ಶ್ರೀಲಂಕಾದ ಅಗ್ರಸರದಿಯನ್ನು ಪವರ್ಪ್ಲೇ (34ಕ್ಕೆ5) ಅವಧಿಯೊಳಗೆ ಧ್ವಂಸ ಮಾಡಿದರು. ತಂಡ ಅಂತಿಮವಾಗಿ 95 ರನ್ ಗಳಿಸಿ ಹೋರಾಟ ಮುಗಿಸಿತು.

‘ಇದು ಹುಟ್ಟುಹಬ್ಬಕ್ಕೆ ಸುಂದರ ಉಡುಗೋರೆ’ ಎಂದು ಭಾನುವಾರ 27ನೇ ವರ್ಷಕ್ಕೆ ಕಾಲಿಟ್ಟ ಬ್ರೂಕ್ ಪ್ರತಿಕ್ರಿಯಿಸಿದರು.

ಅಮೋಫ ಲಯದಲ್ಲಿರುವ ಪಥುಮ್ ನಿಸಾಂಕ ಸೇರಿದಂತೆ ಶ್ರೀಲಂಕಾದ ಆರಂಭ ಆಟಗಾರರ ವಿಕೆಟ್ಗಳನ್ನು ಆರ್ಚರ್ ಬೇಗನೇ ಪಡೆದರು. ನಿಸ್ಸಾಂಕ (9) ಅವರು ಡೀಪ್ ಮಿಡ್ ವಿಕೆಟ್ಮೇಲೆ ಚೆಂಡನ್ನು ಬಾರಿಸಲು ಹೋಗಿ, ಜೇಮಿ ಓವರ್ಟನ್ ಅವರನ್ನು ವಂಚಿಸಲು ಸಾಧ್ಯವಾಗಲಿಲ್ಲ.

ಕುಸಲ್ ಮೆಂಡಿಸ್ (4) ಮತ್ತು ಪವನ್ ರತ್ನಾಯಕೆ ಅವರ ವಿಕೆಟ್ಗಳನ್ನು ಆಫ್ ಸ್ಪಿನ್ನರ್ ಜಾಕ್ಸ್ ಸತತ ಎಸೆತಗಳಲ್ಲಿ ಪಡೆದರು. ದುನಿತ್ ವೆಲ್ಲಾಳಗೆ (10) ಅವರು ಹ್ಯಾಟ್ರಿಕ್ ತಪ್ಪಿಸಿದರಷ್ಟೇ. ಆದರೆ ಹತ್ತು ಎಸೆತಗಳನ್ನು ಆಡಿ ಜಾಕ್ಸ್ಗೆ ವಿಕೆಟ್ ನೀಡಿದರು.

ದಸುನ್ ಶನಕ ಏಕಾಂಗಿಯಾಗಿ ಹೋರಾಟ ನಡೆಸಿ 24 ಎಸೆತಗಳಲ್ಲಿ 30 ರನ್ ಗಳಿಸಿದರು. ಆದರೆ ಕೊನೆಯಲ್ಲಿ ಅದಿಲ್ ರಶೀದ್ ಅವರಿಗೆ ಬಲಿಯಾದರು. ಲಂಕಾ ನಾಯಕ, ಲಾಂಗ್ಆನ್ಗೆ ಚೆಂಡನ್ನು ಎತ್ತಿದರು. ಆದರೆ ಕ್ಯಾಚ್ ಹಿಡಿದ ಜಾಕ್ಸ್ ಬೌಂಡರಿ ಗೆರೆ ದಾಟುವ ಮೊದಲೇ ಚೆಂಡನ್ನು ಒಳಗೆ ಚಿಮ್ಮಿಸಿದರು. ಟಾಮ್ ಬ್ಯಾಂಟನ್ ಕ್ಯಾಚ್ ಪೂರೈಸಿದರು.

ಇದಕ್ಕೆ ಮೊದಲು ಶ್ರೀಲಂಕಾ, ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಸೀಮಿತಗೊಳಿಸಿತ್ತು. ವೆಲ್ಲಾಳಗೆ ಇದಕ್ಕೆ ಮುಖ್ಯ ಕಾರಣರಾದರು. ಆರಂಭ ಆಟಗಾರ ಫಿಲ್ ಸಾಲ್ಟ್ 40 ಎಸೆತಗಳಲ್ಲಿ 6 ಬೌಂಡರಿ, ಎರಡು ಸಿಕ್ಸರ್ಗಳಿದ್ದ 62 ರನ್ ಗಳಿಸಿದರು. ಆದರೆ ಉಳಿದ ಬ್ಯಾಟರ್ಗಳನ್ನು ಆತಿಥೇಯ ಬೌಲರ್ಗಳು ನಿಯಂತ್ರಿಸಿದರು.

ಆರಂಭದಲ್ಲೇ ದಾಳಿಗಿಳಿದ ವೆಲ್ಲಾಳಗೆ ಅವರು ಜೋಸ್ ಬಟ್ಲರ್ (7) ಮತ್ತು ಹ್ಯಾರಿ ಬ್ರೂಕ್ (14) ಅವರ ವಿಕೆಟ್ಗಳನ್ನು ಎಲ್ಬಿಡಬ್ಲ್ಯು ಆಗಿ ಪಡೆದರು. 10 ಓವರುಗಳು ಕಳೆದಾಗ ಇಂಗ್ಲೆಂಡ್ ಮೊತ್ತ 4 ವಿಕೆಟ್ಗೆ 68. ಸಾಲ್ಟ್, ವೆಲ್ಲಾಳಗೆ ಬೌಲಿಂಗ್ನಲ್ಲಿ ಲಾಂಗ್ಆಫ್ನಲ್ಲಿ ಕ್ಯಾಚಿತ್ತರು. ಸಾಲ್ಟ್ ಬಿಟ್ಟರೆ ಜಾಕ್ಸ್ (21) ಅವರು 20ರ ಗಡಿ ದಾಟಿದ ಇಂಗ್ಲೆಂಡ್ನ ಏಕೈಕ ಆಟಗಾರ ಎನಿಸಿದರು.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್: 9 ವಿಕೆಟ್ಗೆ 146 (ಫಿಲ್ ಸಾಲ್ಟ್ 62, ವಿಲ್ ಜಾಕ್ಸ್ 21; ಮಧುಶಂಖ 25ಕ್ಕೆ2, ದುನಿತ್ ವೆಲ್ಲಾಳಗೆ 26ಕ್ಕೆ3, ಮಹೀಷ ತೀಕ್ಷಣ 21ಕ್ಕೆ2);

ಶ್ರೀಲಂಕಾ: 16.4 ಓವರುಗಳಲ್ಲಿ 95 (ದಸುನ್ ಶನಕ 30; ಜೋಫ್ರಾ ಆರ್ಚರ್ 20ಕ್ಕೆ2, ವಿಲ್ ಜಾಕ್ಸ್ 22ಕ್ಕೆ3, ಲಿಯಾಮ್ ಡಾಸನ್ 27ಕ್ಕೆ2, ಅದಿಲ್ ರಶೀದ್ 13ಕ್ಕೆ2)

ಪಂದ್ಯದ ಆಟಗಾರ: ವಿಲ್ ಜಾಕ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.